ಜಮೀನುಗಳಲ್ಲಿ ಬಿತ್ತಿದ್ದ ತೊಗರಿ, ಉದ್ದು, ಹತ್ತಿ ಮತ್ತು ಹೆಸರು ಬೆಳೆಗಳು ಮಳೆ ನೀರಿನಿಂದ ಹಾನಿಯಾಗಿತ್ತು. ಜತೆಗೆ ಬ್ಯಾಂಕ್ ಸೇರಿ ಖಾಸಗಿಯಾಗಿ ₹7 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದರು. ಸಾಲಕ್ಕೆ ಹೆದರಿದ್ದ ಚಂದ್ರಪ್ಪ ಅವರು ಕಿಟನಾಶಕ ಕುಡಿದಿದ್ದಾರೆ. ಚಿಂಚೋಳಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.