ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೇನಾನಿಗಳಿಗೆ ಸನ್ಮಾನ

Last Updated 5 ಅಕ್ಟೋಬರ್ 2021, 14:40 IST
ಅಕ್ಷರ ಗಾತ್ರ

ಕಲಬುರ್ಗಿ: ‘ಮನುಷ್ಯ ಎಷ್ಟೇ ಹಣ ಸಂಪತ್ತು ಆಸ್ತಿ ಗಳಿಸಿದರೂ ಸಮಾಧಾನ, ಶಾಂತಿ ದೊರೆಯದಿದ್ದಲ್ಲಿ ಎಲ್ಲವೂ ವ್ಯರ್ಥವಾದಂತೆ. ಹಾಗಾಗಿ ಪ್ರತಿಯೊಬ್ಬರೂ ಪರಸ್ಪರರೊಡನೆ ಪ್ರೀತಿಯಿಂದ ವರ್ತಿಸಬೇಕು. ಆ ಮೂಲಕ ಉತ್ತಮ ಬಾಂಧವ್ಯ ಹೊಂದಬೇಕು. ಮತ್ತೊಬ್ಬರ ಭಾವನೆಗಳನ್ನು ಅರಿತು ಬದುಕಬೇಕು’ ಎಂದು ಛಪ್ಪರಬಂದಿ ಪ್ರಭಾಕರ ಪ್ರತಿಷ್ಠಾನದ ಮುಖ್ಯಸ್ಥ ಡಾ.ಶರಣರಾಜ್ ಛಪ್ಪರಬಂದಿ ಹೇಳಿದರು.

ಪ್ರತಿಷ್ಠಾನದ ವತಿಯಿಂದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಕೊರೊನಾದ ಸಂಕಷ್ಟದ ಸಂದರ್ಭದಲ್ಲಿ ಹಗಲಿರುಳು ತಮ್ಮ ವೃತ್ತಿಯ ಜತೆಗೆ ಜನಸೇವೆಗೈದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದ ವಿವಿಧ ಇಲಾಖೆಗಳ ಪ್ರಮುಖರಿಗೆ ಏರ್ಪಡಿಸಿದ ಗೌರವ ಸಮ್ಮಾನ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಕೊರೊನಾ ಸೇನಾನಿಗಳಾಗಿ ಉತ್ತಮ ಕೊಡುಗೆ ನೀಡಿದ ವಿವಿಧ ಇಲಾಖೆಗಳ ಪ್ರಮುಖರಾದ ನಾಗಪ್ಪಾ ಆಗೋತೀರ್ಥ, ಶಂಕರ ಫರಹತಾಬಾದ, ಗುರುಶಾಂತ ಮುತ್ತಗಿ ಗೋಟೂರ, ಯೌಲೀನ್, ಶಿವಲಿಂಗ ಅವರನ್ನು ಗೌರವಿಸಲಾಯಿತು.

ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿದರು. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಂಟೆಪ್ಪ ಭಾವಗಿ, ಸುವರ್ಣಾ ಎಸ್.ಛಪ್ಪರಬಂದಿ, ಡಾ.ಗುರುರಾಜ ಛಪ್ಪರಬಂದಿ, ಟಿ.ಆರ್.ರಾಮಪೂರೆ, ನಂದೀಶ ಪಾಟೀಲ, ಕರಬಸಪ್ಪ ಮೂಲಗೆ, ಮಹಾದೇವಪ್ಪ ಅಟ್ಟೂರ, ಕಲ್ಯಾಣಕುಮಾರ ಶೀಲವಂತ, ನಾಗೇಂದ್ರಪ್ಪ ಮಾಡ್ಯಾಳೆ, ಸಂತೋಷ ಕುಡಳ್ಳಿ, ಮಂಜುನಾಥ ಕಂಬಳಿಮಠ, ಪ್ರಭುಲಿಂಗ ಮೂಲಗೆ, ಮಾಲಾ ದಣ್ಣೂರ, ಮಾಲಾ ಕಣ್ಣಿ, ಭುವನೇಶ್ವರಿ ಹಳ್ಳಿಖೇಡ, ಪ್ರಸನ್ನ ವಾಂಜರಖೇಡೆ, ಸವಿತಾ ಪಾಟೀಲ, ಶರಣಬಸವ ಜಂಗಿನಮಠ, ಸಿದ್ಧಾರಾಮ ಹಂಚನಾಳ, ಶಿವಾನಂದ ಮಠಪತಿ, ಡಾ.ಬಾಬುರಾವ ಶೇರಿಕಾರ, ಸುರೇಶ ವಗ್ಗೆ, ಪ್ರಭವ ಪಟ್ಟಣಕರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT