ಬುಧವಾರ, ಆಗಸ್ಟ್ 4, 2021
21 °C

5 ವರ್ಷದ ಬಾಲಕ ಮಠದ ಉತ್ತರಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳಗಿ (ಕಲಬುರ್ಗಿ ಜಿಲ್ಲೆ): ಇಲ್ಲಿಯ ಸಂಸ್ಥಾನ ಹಿರೇಮಠದಲ್ಲಿ ಸೋಮವಾರ ಹೃದಯಾಘಾತದಿಂದ ಲಿಂಗೈಕ್ಯರಾದ ಪೀಠಾಧಿಪತಿ ಶಿವಬಸವ ಶಿವಾಚಾರ್ಯರ (45) ಉತ್ತರಾಧಿಕಾರಿಯಾಗಿ ಅವರ ಪೂರ್ವಾಶ್ರಮದ ಸಹೋದರ ಗುರುನಂಜಯ್ಯ ಹಿರೇಮಠ ಅವರ ಮಗ, ಐದು ವರ್ಷದ ಬಾಲಕ ನೀಲಕಂಠ ಅವರನ್ನು ನೇಮಿಸಲಾಯಿತು.

ಹಿರೇನಾಗಾಂವ ಮಠದ ಶ್ರೀಗಳು ಮಂಗಳವಾರ, ಶಿವಬಸವ ಶಿವಾಚಾರ್ಯರ ತಲೆಯ ಮೇಲಿದ್ದ ಹಸಿರು ಶಾಲು, ಕೈಯಲ್ಲಿದ್ದ ಬೆತ್ತವನ್ನು ಉತ್ತರಾಧಿಕಾರಿಗೆ ಹಸ್ತಾಂತರಿಸಿದರು.

‘ಪೀಠಾಧಿಪತಿ ನಿಧನದ ನಂತರ ಉತ್ತರಾಧಿಕಾರಿ ಸ್ಥಾನ ಖಾಲಿ ಬಿಡುವಂತಿಲ್ಲ. ಹೀಗಾಗಿ ನೇಮಿಸಲಾಗಿದೆ’ ಎಂದು ಭಕ್ತರು ಹೇಳಿದರು. ಶಿವಬಸವ ಶಿವಾಚಾರ್ಯರ ಅಂತ್ಯಕ್ರಿಯೆಯು ಪಂಚಾಚಾರ್ಯರ ತತ್ವದಂತೆ ಮಠದ ಆವರಣದಲ್ಲಿ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು