ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ತಾಪುರ: ಕಳೆಗಟ್ಟಿದ ಗಣೇಶ ಚತುರ್ಥಿ ಸಂಭ್ರಮ

Published : 8 ಸೆಪ್ಟೆಂಬರ್ 2024, 15:46 IST
Last Updated : 8 ಸೆಪ್ಟೆಂಬರ್ 2024, 15:46 IST
ಫಾಲೋ ಮಾಡಿ
Comments

ಚಿತ್ತಾಪುರ: ಪಟ್ಟಣದಲ್ಲಿ ಗಣೇಶ ಚತುರ್ಥಿಯ ಸಂಭ್ರಮ ಕಳೆಗಟ್ಟಿತ್ತು. ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪನೆಗೆಂದು ತಂದಿದ್ದ ಗಣೇಶ ಮೂರ್ತಿಗಳ ಮೆರವಣಿಗೆ, ಶ್ರದ್ಧೆಭಕ್ತಿಯಿಂದ ನೆರವೇರಿತು.

ಗಣೇಶ ಮೂರ್ತಿ ಸ್ಥಾಪನೆಗೆಂದು ಕಲಬುರಗಿ, ಹೈದರಾಬಾದ್‌ ನಗರಗಳಿಂದ ತಂದಿದ್ದ ಗಣೇಶ ಮೂರ್ತಿಗಳನ್ನು ಮುಂಚಿತವಾಗಿ ಪಟ್ಟಣದಲ್ಲಿನ ಬಾಲಾಜಿ ಮಂದಿರದಲ್ಲಿ ಇಡಲಾಗಿತ್ತು. ಶನಿವಾರ ಅಲ್ಲಿಂದ ಮೆರವಣಿಗೆ ಮೂಲಕ ನಿಗದಿತ ಸ್ಥಳಗಳಿಗೆ ತೆಗೆದುಕೊಂಡು ಹೋಗಲಾಯಿತು.

ಗಣೇಶ ಮೂರ್ತಿ ಮೆರವಣಿಗೆಯಲ್ಲಿ ಡೊಳ್ಳು ವಾದನ, ಬ್ಯಾಂಡ್ ವಾದನಕ್ಕೆ ಯುವಕರು, ಮಕ್ಕಳು ಕುಣಿದರು. ವರ್ಣಮಯ ಪಟಾಕಿಗಳು ಮನರಂಜಿಸಿದವು. ರೈಲ್ವೆ ಸ್ಟೇಷನ್ ರಸ್ತೆ ಮಾರ್ಗದಲ್ಲಿ ಸ್ಥಾಪಿಸಿದ ಗಣೇಶ ಮೂರ್ತಿಗೆ ಪುರಸಭೆ ಸದಸ್ಯೆ ಸುಮಂಗಲಾ ಅಣ್ಣಾರಾವ ಸಣ್ಣುರಕರ, ಬಿಜೆಪಿ ಅಕ್ಕಮಹಾದೇವಿ ನಾಗೇಶ ದೊಡ್ಡಮನಿ ಅವರು ಪೂಜೆ ಸಲ್ಲಿಸಿದರು.

ಮೂರ್ತಿ ಸ್ಥಾಪನೆಗೆಂದು ಹಾಕಲಾದ ಪೆಂಡಾಲ್ ವೈವಿಧ್ಯಮಯವಾಗಿ ಅಲಂಕರಿಸಿ, ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದ್ದವು. ಗಣೇಶನ ಹಾಡುಗಳ ಅಬ್ಬರ ಜೋರಾಗಿತ್ತು. ಮೂರ್ತಿ ಸ್ಥಾಪನೆಯಾಗುತ್ತಿದ್ದಂತೆ ಬಡಾವಣೆಯ ಮಹಿಳೆಯರು, ಯುವತಿಯರು, ಮಕ್ಕಳು ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ, ಪ್ರಾರ್ಥನೆಯೊಂದಿಗೆ ಆರತಿ ಬೆಳಗಿ, ಭಕ್ತಿ ಅರ್ಪಿಸಿ, ಗಣೇಶ ಹಬ್ಬಕ್ಕೆ ಮರಗು ನೀಡಿದರು.

ಹಬ್ಬದ ಆಚರಣೆಗೆ ತೊಂದರೆ, ಸಮಸ್ಯೆ ಹಾಗೂ ಸಾರ್ವಜನಿಕ ಶಾಂತಿಗೆ ಭಂಗವಾಗದಂತೆ ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಕೆಲವು ಗಣೇಶ ಉತ್ಸವ ಮಂಡಳಿಯವರು ಅಧಿಕೃತ ಅನುಮತಿ ಪಡೆದುಕೊಂಡಿದ್ದಾರೆ. ಇನ್ನೂ ಅನುಮತಿ ಪಡೆಯದವರು ಠಾಣೆಯಲ್ಲಿ ನಿಗದಿತ ಅರ್ಜಿ ಭರ್ತಿ ಮಾಡಿ, ಮಾಹಿತಿ ನೀಡಿ ಅನುಮತಿ ಪಡೆಯಬೇಕು. ಗಣೇಶ ಮೂರ್ತಿ ಇರುವ ಪೆಂಡಾಲ್ ಹತ್ತಿರ ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲು ಅನುಕೂಲವಾಗುತ್ತದೆ’ ಎಂದು ಪಿಎಸ್ಐ ಶ್ರೀಶೈಲ್ ಅಂಬಾಟಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT