ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ಜಿಮ್ಸ್ ಆಸ್ಪತ್ರೆ ಐಸಿಯು ವಾರ್ಡ್‌ನಲ್ಲಿ ಕೆಟ್ಟ ಎಸಿ; ರೋಗಿಗಳ ಪರದಾಟ

Published 19 ಮಾರ್ಚ್ 2024, 3:12 IST
Last Updated 19 ಮಾರ್ಚ್ 2024, 3:12 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಜಿಮ್ಸ್ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಒಂದು ತಿಂಗಳಿಂದ ಏರ್‌ ಕೂಲರ್‌ಗಳು ಕೆಟ್ಟಿರುವುದರಿಂದ ಸಮರ್ಪಕವಾಗಿ ಗಾಳಿಯ ವ್ಯವಸ್ಥೆ ಇಲ್ಲದೇ ರೋಗಿಗಳು ಪರದಾಡುತ್ತಿದ್ದಾರೆ. ಐಸಿಯು ವಾರ್ಡ್‌ನಲ್ಲಿ ಸುಮಾರು 14 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಯಾವುದೇ ಗಾಳಿಯ ವ್ಯವಸ್ಥೆ ಇರದ ಕಾರಣ ಐಸಿಯು ಕೋಣೆಯ ಕಿಟಕಿಗಳನ್ನು ತೆಗೆಯಲಾಗಿದೆ.

ಐಸಿಯುನಲ್ಲಿ ಎಸಿ ಇಲ್ಲದೆ ಹಗಲು–ರಾತ್ರಿ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ರಣ ಬಿಸಿಲಿಗೆ ಜನ ಕಂಗೆಟ್ಟು ಹೋಗಿದ್ದು, ಐಸಿಯು ವಿಭಾಗದಲ್ಲಿ ಜಿಮ್ಸ್ ಆಡಳಿತ ಮಂಡಳಿ ಕನಿಷ್ಠ ಫ್ಯಾನ್‌ಗಳ ವ್ಯವಸ್ಥೆ ಮಾಡದೇ ಇರುವುದರಿಂದ ರೋಗಿಗಳು ಹೈರಾಣಾಗಿದ್ದಾರೆ. ಕೆಲ ರೋಗಿಯ ಸಂಬಂಧಿಕರು ಮನೆಯಿಂದಲೇ ಫ್ಯಾನ್‌ಗಳನ್ನು ತಂದು ಹಚ್ಚಿದ್ದಾರೆ ಎಂದು ಗೊತ್ತಾಗಿದೆ.

ಜಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಸರ್ಕಾರ ರೋಗಿಗಳ ಜತೆಗೆ ಚೆಲ್ಲಾಟ ಆಡುತ್ತಿದೆ ಎಂದು ರೋಗಿಗಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ‘ಐಸಿಯುನಲ್ಲಿ ಎ.ಸಿ.ಗಳು ಕೆಟ್ಟು ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ತಕ್ಷಣ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೇ, 500 ಎಸಿಗಳನ್ನು ಖರೀದಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT