ಅಫಜಲಪುರ: ತಾಲ್ಲೂಕಿನ ಗೊಬ್ಬುರ(ಬಿ) ವಾಡಿ ತಾಂಡಾದಲ್ಲಿ ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿದೆ. ಅಂಜಲಿ ರಮೇಶ ಅಡೆ(14) ಮೃತ ಬಾಲಕಿ. ಗೊಬ್ಬುರ(ಬಿ)ವಾಡಿ ತಾಂಡಾದ ರಮೇಶ ದಿಪುಲು ಅಡೆ ಅವರಿಗೆ ಮೂವರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಅಂಜಲಿ ಎಂಬ ಹಿರಿಯ ಪುತ್ರಿಯಾಗಿದ್ದು, 8ನೇ ತರಗತಿ ಮುಗಿಸಿ ಮನೆಯಲ್ಲಿಯೇ ಇದ್ದಳು.
ಬಾಲಕಿ ಪೋಷಕರಾದ ತಂದೆ ರಮೇಶ ಹಾಗೂ ತಾಯಿ ಸುನೀತಾ, ಆಳಂದ ತಾಲ್ಲೂಕಿನ ಖಡಲಗಿ ಗ್ರಾಮಕ್ಕೆ ಅವರ ಸಂಬಂಧಿಕರನ್ನು ಮಾತನಾಡಿಸಲು ಹೋಗಿದ್ದಾರೆ. ಬರುವ ವೇಳೆಗೆ ಮಗಳು ಅಂಜಲಿ ಮೃತಪಟ್ಟಿದ್ದಾಳೆ. ಅವರು ಹಡಲಗಿಯಿಂದ ಬರುವುದರೊಳಗೆ ನೇಣು ಹಾಕಿಕೊಂಡ ಅಂಜಲಿಯ, ನೇಣು ಕುಣಿಕೆ ತೆಗೆದು ಮನೆಯಲ್ಲಿ ಮಲಗಿಸಲಾಗಿತ್ತು. ಹೀಗಾಗಿ ಸಂಶಯಗೊಂಡು ಬಾಲಕಿ ರಮೇಶ ಅಡೆ ಅವರು ದೇವಲಗಾಣಗಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.