ಬುಧವಾರ, ಜುಲೈ 28, 2021
21 °C
ಮಲೆನಾಡಿನಂತೆ ಧೋ ಎಂದು ಸುರಿಯುತ್ತಿರುವ ಮಳೆ

ಎರಡನೇ ದಿನವೂ ಉತ್ತಮ ವರ್ಷಧಾರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಸತತ ಎರಡನೇ ದಿನವೂ ಬುಧವಾರ ನಗರ ಸೇರಿದಂತೆ ಜಿಲ್ಲೆಯ ಚಿಂಚೋಳಿ, ಕಾಳಗಿ, ಕಮಲಾಪುರ, ಚಿತ್ತಾಪುರ ಹಾಗೂ ಸೇಡಂ ತಾಲ್ಲೂಕಿನ ಹಲವೆಡೆ ಬಿರುಸಿನ ಮಳೆಯಾಗುವ ಮೂಲಕ ಮಲೆನಾಡಿನ ವಾತಾವರಣ ನಿರ್ಮಾಣವಾಗಿದೆ.

ನಗರದಲ್ಲಿ ಮಧ್ಯಾಹ್ನದ ಬಳಿಕ ಶುರುವಾದ ಮಳೆ ಸಂಜೆಯವರೆಗೆ ಒಂದೇ ಸಮನೆ ಸುರಿಯಿತು. ಸಂಜೆ ಕೊಂಚ ಬಿಡುವು ಕೊಟ್ಟಂತೆ ಮಾಡಿ ಮತ್ತೆ ಜಿಟಿ ಜಿಟಿ ಮಳೆ ತಡರಾತ್ರಿಯವರೆಗೂ ಬೀಳುತ್ತಲೇ ಇತ್ತು. ನಗರದ ಹೊರವಲಯದ ಹೊಲ, ತೋಟಗಳಲ್ಲಿ ಮಳೆಯಿಂದಾಗಿ ನೀರು ನಿಂತಿದೆ. ಬುಧವಾರ ಒಂದೇ ದಿನ ನಗರದಲ್ಲಿ 38 ಮಿಲಿ ಮೀಟರ್ ಮಳೆ ಬಿದ್ದರೆ, ಜಿಲ್ಲೆಯಾದ್ಯಂತ ಸರಾಸರಿ 8.37 ಎಂ.ಎಂ. ಮಳೆ ಸುರಿಯಿತು.

ಜಿಲ್ಲೆಯಲ್ಲಿ ವರುಣ ಕೃಪೆ ತೋರಿರುವುದರಿಂದ ಕೃಷಿ ಹೊಂಡಗಳು, ಚೆಕ್‌ ಡ್ಯಾಮ್‌ಗಳು, ನರೇಗಾ ಯೋಜನೆಯಡಿ ಹೂಳೆತ್ತಲಾದ ಕೆರೆಗಳು, ಹೊಲದ ಬದುಗಳಲ್ಲಿ ನೀರು ತುಂಬಿಕೊಳ್ಳುತ್ತಿದೆ. ಇದರಿಂದ ಹೊಸ ಜೀವಕಳೆ ಬಂದಂತಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು