ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಸ್ಯೆಗಳ ಪರಿಹಾರಕ್ಕೆ ಗ್ರಾಮ ವಾಸ್ತವ್ಯ ಉಪಯುಕ್ತ’

Last Updated 20 ಮಾರ್ಚ್ 2022, 5:31 IST
ಅಕ್ಷರ ಗಾತ್ರ

ಅಫಜಲಪುರ: ‘ಎಲ್ಲ ಇಲಾಖೆಯ ಅಧಿಕಾರಿಗಳು ಒಂದು ಕಡೆ ಸೇರುವುದರಿಂದ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಇದರ ಲಾಭವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು. ಕೇವಲ ಶಾಸಕರೊಬ್ಬರ ಕೆಲಸ ಮಾಡಿದರೆ ಸಾಲದು ಅಧಿಕಾರಿಗಳು ಕೈಜೋಡಿಸಿದರೆ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ಆಗುತ್ತವೆ’ ಎಂದು ಶಾಸಕ ಎಂ.ವೈ ಪಾಟೀಲ್ ಹೇಳಿದರು.

ತಾಲ್ಲೂಕಿನ ಮಲ್ಲಾಬಾದ ಗ್ರಾ.ಪಂ ವ್ಯಾಪ್ತಿಯ ಮಾತೋಳಿ ಗ್ರಾಮದಲ್ಲಿ ನಡೆದ ತಹಸೀಲ್ದಾರ್ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮದ ಮುಖಂಡ ಮಹಾಂತಪ್ಪ ಬಬಲೇಶ್ವರ ಮಾತನಾಡಿ, ಸ್ಮಶಾನ, ಕುಡಿಯುವ ನೀರು, ಹೊಲ ಗದ್ದೆಗಳಿಗೆ ರಾತ್ರಿ ವಿದ್ಯುತ್ ಪೂರೈಕೆ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರು.

ತಹಶೀಲ್ದಾರ್ ಸಂಜೀವಕುಮಾರ ದಾಸರ್, ‘ಪಹಣಿ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸಲಾಗುತ್ತದೆ, ಪಿಂಚಣಿ ಸಮಸ್ಯೆ ಇರುವವರಿಗೆ ಸ್ಥಳದಲ್ಲೇ ಸಮಸ್ಯೆ ಪರಿಶೀಲಿಸಿ ಪರಿಹಾರ ಒದಗಿಸಲಾಗುತ್ತದೆ ಎಂದು ತಿಳಿಸಿದರು.

ಭಾಗ್ಯಲಕ್ಷ್ಮೀ, ಪಿಂಚಣಿ ಯೋಜನೆಳ ಫಲಾನುಭವಿಗಳಿಗೆ ಸ್ಥಳದಲ್ಲೇ ಬಾಂಡ್ ವಿತರಣೆ ಮಾಡಲಾಯಿತು. ವಿದ್ಯುತ್ ಸಮಸ್ಯೆ ಕುರಿತು ಜೇಸ್ಕಾಂ ಅಧಿಕಾರಿಗಳು ಸಮಸ್ಯೆ ಪರಿಹಾರ ಮಾಡುವುದಾಗಿ ಭರವಸೆ ನೀಡಿದರು.

ಗ್ರಾ.ಪಂ ಅಧ್ಯಕ್ಷ ಚಿದಾನಂದ ಬಸರಿಗಿಡ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷೆ ಕಲ್ಲವ್ವ ಈರಕರ, ಸದಸ್ಯ ಸಂಗಣ್ಣ ಆಲಮೇಲ, ಸತೀಶ ಜಮಾದಾರ, ಮುಖಂಡರಾದ ವಿಜಯಕುಮಾರ ಸಗರ, ದಿಗಂಬರ ಪಾಟೀಲ್, ಮಲ್ಲಿಕಾರ್ಜುನ ಪೂಜಾರಿ, ಅಶೋಕ ಬಗಲಿ ಮತ್ತಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT