ಶುಕ್ರವಾರ, ಜೂನ್ 18, 2021
20 °C

ಹೆಸರುಕಾಳು ಇಳುವರಿ ಕುಸಿತದ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಡಿ: ಕೊರೊನಾ ಲಾಕ್‌ಡೌನ್‌ನಿಂದ ಸಮಸ್ಯೆಗೆ ಸಿಲುಕಿದ್ದ ರೈತರಿಗೆ ಅತಿವೃಷ್ಟಿಯು ಗಾಯದ ಮೇಲೆ ಬರೆ ಎಳೆದಿದೆ. ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹೆಸರು ಬೆಳೆಯಲ್ಲಿ ಶೇ50 ರಷ್ಟು ಇಳುವರಿ ಕಡಿಮೆಯಾಗುವ ಭೀತಿ ಸೃಷ್ಟಿಯಾಗಿದೆ.

ನಾಲವಾರ ವಲಯದ ಕೆಂಪು ಹಾಗೂ ಕಪ್ಪು ಮಣ್ಣಿನಲ್ಲಿ ಬಿತ್ತನೆ ಮಾಡಿದ ಹೆಸರು ಬೆಳೆ ಮಳೆಯ ಅರ್ಭಟಕ್ಕೆ ಸಿಲುಕಿ ಹೊಲದಲ್ಲಿಯೇ ಕೊಳೆತು ಹೋಗುತ್ತಿದೆ.

ತೊಗರಿಯೊಂದಿಗೆ ಮಿಶ್ರ ಬೆಳೆಯಾಗಿ ಹಾಗೂ ಒಂಟಿಯಾಗಿ ಬಿತ್ತನೆ ಮಾಡಿದ್ದ ಹೆಸರು ಉತ್ತಮ ಇಳುವರಿಯ ನಿರೀಕ್ಷೆ ಮೂಡಿಸಿತ್ತು. ಮೊಳಕಾಲುದ್ದ ಬೆಳೆದಿದ್ದ ಫಸಲು ರೈತರಲ್ಲಿ ಹೊಸ ಭರವಸೆ ಸೃಷ್ಟಿಸಿದ್ದ ಬೆಳೆ ನಂತರ ನಿರಾಶೆ ಮೂಡಿಸಿದೆ.

ಜಿಟಿ ಜಿಟಿ ಮಳೆಯಿಂದ ಹಸಿ ತೇವಾಂಶ ಹೆಚ್ಚಾಗಿ ಕಾಳುಗಳಿಗೆ ಮೊಳಕೆ ಬರುತ್ತಿವೆ. ಈಗಾಗಲೇ ಒಣಗಿ ನಿಂತು ಕಟಾವಿಗೆ ಬಂದಿದ್ದ ಒಣ ಕಾಳುಗಳು ಕೊಳೆತು ಹೋಗಿವೆ. ಇದರಿಂದ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರು ಈಗ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.

ಆಗಸದಲ್ಲಿ ದಟ್ಟವಾಗುವ ಕಾರ್ಮೋಡಗಳು ರೈತರ ಎದೆ ಧಸ್ಸೆನ್ನುವಂತೆ ಮಾಡುತ್ತಿವೆ. ಜಮೀನುಗಳಿಗೆ ತೆರಳಿ ಹಾಳಾದ ಬೆಳೆ ನೋಡಿ ಮಮ್ಮಲ ಮರುಗುವಂತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು