ಕಲಬುರಗಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಜ್ಯೋತಿ’ ಯೋಜನೆ ಜಾರಿಯಾಗಿ ಆಗಸ್ಟ್ಗೆ ಎರಡು ವರ್ಷ ಪೂರ್ಣಗೊಂಡಿದ್ದು, ಜೆಸ್ಕಾಂ ವ್ಯಾಪ್ತಿಯಲ್ಲಿ ಈ ಯೋಜನೆಯಡಿ 21.41 ಲಕ್ಷಕ್ಕೂ ಹೆಚ್ಚು ಮನೆಗಳು ಬೆಳಗಿವೆ.

ಮಾಸಿಕ ಗರಿಷ್ಠ 200 ಯೂನಿಟ್ವರೆಗೆ ವಿದ್ಯುತ್ ಬಳಸುವ ಗ್ರಾಹಕರಿಗೆ ಉಚಿತ ವಿದ್ಯುತ್ ಕಲ್ಪಿಸುವ ಗೃಹಜ್ಯೋತಿ ಯೋಜನೆ ಅಧಿಕೃತವಾಗಿ ಜಾರಿಗೊಂಡು ಆಗಸ್ಟ್ 1ಕ್ಕೆ (2023ರ ಜೂನ್ 18ರಿಂದ ನೋಂದಣಿ ಆರಂಭವಾಗಿತ್ತು) ಎರಡು ವರ್ಷಗಳಾಗಿವೆ. ಈ ಯೋಜನೆಯಿಂದ ಲಕ್ಷಾಂತರ ಕುಟುಂಬಗಳು ಅನುಕೂಲ ಪಡೆದಿವೆ.

ಗೃಹಜ್ಯೋತಿ ಯೋಜನೆ ನೋಂದಣಿ ನಿರಂತರ ಪ್ರಕ್ರಿಯೆಯಾಗಿದ್ದು, 2025ರ ಜುಲೈ ಅಂತ್ಯದವರೆಗೆ 21,94,217 ಮಂದಿ ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 14,08,767 ಫಲಾನುಭವಿಗಳು ಶೂನ್ಯ ಬಿಲ್ ಮತ್ತು ನಿಗದಿಗಿಂತ ಹೆಚ್ಚು ವಿದ್ಯುತ್ ಬಳಸಿದ 7,32,847 ಮಂದಿ ಭಾಗಶಃ ಬಿಲ್ಗಳನ್ನು ಪಡೆದಿದ್ದಾರೆ.

ಗೃಹಜ್ಯೋತಿ ಯೋಜನೆಯಡಿ ಜುಲೈ ಅಂತ್ಯದವರೆಗೆ 21,41,614 ಫಲಾನುಭವಿಗಳು 2,453.51 ದಶಲಕ್ಷ ಯೂನಿಟ್ ವಿದ್ಯುತ್ ಬಳಕೆ ಮಾಡಿದ್ದಾರೆ. ಇದರ ಒಟ್ಟು ವಿದ್ಯುತ್ ಬಿಲ್ ಮೊತ್ತ ₹2,327.42 ಕೋಟಿ.

ಜೆಸ್ಕಾಂ ಅಧಿಕಾರಿಗಳ ಪರಿಶ್ರಮದ ಫಲವಾಗಿ ಗೃಹಜ್ಯೋತಿ ಯೋಜನೆ ‘ಕಲ್ಯಾಣ’ದಲ್ಲಿ ಯಶಸ್ಸು ಕಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಫಲಾನುಭವಿಗಳು ಇದರ ಲಾಭ ಪಡೆಯುವಂತೆ ಕಾರ್ಯನಿರ್ವಹಿಸುತ್ತೇವೆ
ಕೃಷ್ಣ ಬಾಜಪೇಯಿ, ವ್ಯವಸ್ಥಾಪಕ ನಿರ್ದೇಶಕ

ಜೆಸ್ಕಾಂ ವ್ಯಾಪ್ತಿಯಲ್ಲಿ ಗೃಹಜ್ಯೋತಿ ನೋಂದಣಿ ವಿವರ

ಈ ತನಕ ಒಟ್ಟು ನೋಂದಣಿಯಾದ ಫಲಾನುಭವಿಗಳು; 2194217

ಶೂನ್ಯ ಬಿಲ್ ಪಡೆದ ಫಲಾನುಭವಿಗಳು; 1408767

‘ಶೂನ್ಯ’ ಮಿತಿಗಿಂತ ಹೆಚ್ಚು ವಿದ್ಯುತ್ ಬಳಸಿದ ಫಲಾನುಭವಿಗಳು; 732847

ಕಲಬುರಗಿ ಜಿಲ್ಲೆ; 5.49 ಲಕ್ಷ

ಬಳ್ಳಾರಿ; 2.86 ಲಕ್ಷ

ಬೀದರ್;3.53 ಲಕ್ಷ

ಕೊಪ್ಪಳ;2.78 ಲಕ್ಷ

ರಾಯಚೂರು; 3.07 ಲಕ್ಷ

ವಿಜಯನಗರ; 2.26 ಲಕ್ಷ

ಯಾದಗಿರಿ; 1.93 ಲಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.