ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಹೆಚ್ಚಳ, ಸೇವಾ ಭದ್ರತೆಗೆ ಒತ್ತಾಯ- ಅತಿಥಿ ಉಪನ್ಯಾಸಕರಿಂದ ಬೃಹತ್ ಮೆರವಣಿಗೆ

Last Updated 29 ಡಿಸೆಂಬರ್ 2021, 5:58 IST
ಅಕ್ಷರ ಗಾತ್ರ

ಕಲಬುರಗಿ: ವಿಶ್ವವಿದ್ಯಾಲಯದ ನಿಯಮಾನುಸಾರ ವೇತನ ಹೆಚ್ಚಳ ಮಾಡಬೇಕು ಹಾಗೂ ಸೇವಾ ಭದ್ರತೆ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಸಾವಿರಾರು ಅತಿಥಿ ಉಪನ್ಯಾಸಕರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಯುಜಿಸಿ ಅರ್ಹತೆಯಂತೆ ನೆಟ್, ಸ್ಲೆಟ್, ಪಿಎಚ್‌.ಡಿ. ಮಾಡಿದವರಿಗೂ ₹ 11 ಸಾವಿರ ಹಾಗೂ ₹ 13 ಸಾವಿರ ವೇತನವನ್ನು ನಿಗದಿ ಮಾಡಿ ಡಿ ಗ್ರೂಪ್ ನೌಕರರಿಗಿಂತಲೂ ಕಡೆಯದಾಗಿ ನೋಡಿಕೊಳ್ಳುತ್ತಿದೆ. ಶಿಕ್ಷಕರ ದಿನಾಚರಣೆ ಬಂದಾಗ ಶಿಕ್ಷಕರನ್ನು ಹಾಡಿ ಹೊಗಳುವ ಸರ್ಕಾರದ ಜನಪ್ರತಿನಿಧಿಗಳು ಉನ್ನತ ಶಿಕ್ಷಣ ಪಡೆದವರನ್ನು ಜೀತದಾಳಿನಂತೆ ಶೋಷಣೆ ಮಾಡುತ್ತಿದ್ದಾರೆ.

ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ವೇತನ ಕೊಡುತ್ತಿದ್ದಾರೆ ಎಂದು ಅವರು ಈ ವೇಳೆ ಆರೋಪಿಸಿದರು.

430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 15 ಸಾವಿರಕ್ಕಿಂತ ಅಧಿಕ ಅತಿಥಿ ಉಪನ್ಯಾಸಕರಿದ್ದು, 4 ಲಕ್ಷ ಬಡ ವಿದ್ಯಾರ್ಥಿಗಳಿಗೆ ಪಾಠ ಬೋಧನೆಯಲ್ಲಿ ತೊಡಗಿಸಿಕೊಂಡಿದ್ದು, ಸರ್ಕಾರಕ್ಕೆ ಸಾವಿರಾರು ಕೋಟಿ ಉಳಿತಾಯವಾಗುತ್ತಿದೆ. ಆದರೂ ನಿಯಮಿತವಾಗಿ ವೇತನ ನೀಡುತ್ತಿಲ್ಲ.

ಹರಿಯಾಣ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂ ಮಾಡಿ ಯುಜಿಸಿ ಮೂಲವೇತನ ಕೊಡುತ್ತಿದ್ದಾರೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಮುಖಂಡರಾದ ಜಗಪ್ಪ ತಳವಾರ, ಅಣವೀರಪ್ಪ ಭೋಳೆವಾಡ ಹಾಗೂ ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT