ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

80 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ

ಇಂದು ಗುಲಬರ್ಗಾ ವಿ.ವಿ. 38ನೇ ಘಟಿಕೋತ್ಸವ; 27,163 ವಿದ್ಯಾರ್ಥಿಗಳಿಗೆ ಪದವಿ, ಸ್ನಾತಕೋತ್ತರ ಪದವಿ ಪ್ರದಾನ
Last Updated 19 ನವೆಂಬರ್ 2020, 16:40 IST
ಅಕ್ಷರ ಗಾತ್ರ

ಕಲಬುರ್ಗಿ: ಕೊರೊನಾ ಹಾವಳಿಯಿಂದ ಮುಂದೂಡಲಾಗಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ಘಟಿಕೋತ್ಸವ ಶುಕ್ರವಾರ (ನ.20) ವಿ.ವಿಯ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ನೆರವೇರಲಿದೆ. 80 ವಿದ್ಯಾರ್ಥಿಗಳಿಗೆ 156 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು.

‘ಒಟ್ಟು 27,163 ವಿದ್ಯಾರ್ಥಿಗಳಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುವುದು. ಅದರಲ್ಲಿ 15,029 ವಿದ್ಯಾರ್ಥಿಗಳು ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. 157 ಜನರಿಗೆ ಪಿಎಚ್‌.ಡಿ. ಪದವಿ ಪ್ರದಾನ ಮಾಡಲಾಗುವುದು. ಚಿನ್ನದ ಪದಕ, ನಗದು ಪುರಸ್ಕಾರ ಮತ್ತು ಪಿಎಚ್‌.ಡಿ. ಪಡೆಯುವ ವಿದ್ಯಾರ್ಥಿಗಳನ್ನು ಘಟಿಕೋತ್ಸವಕ್ಕೆ ಆಹ್ವಾನಿಸಲಾಗಿದೆ. ಬೆಂಗಳೂರಿನ ಐಸೆಕ್‌ನ ನಿರ್ದೇಶಕ ಡಾ.ಮಾಧೇಶ್ವರನ್ ಅವರು ಆನ್‌ಲೈನ್ ಮೂಲಕ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ’ ಎಂದು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ. ಚಂದ್ರಕಾಂತ ಯಾತನೂರ ಗುರುವಾರ ಪತ್ರಿಕಾ
ಗೋಷ್ಠಿಯಲ್ಲಿ ತಿಳಿಸಿದರು.

‘ಕಲಾ ವಿಭಾಗದಲ್ಲಿ 28 ವಿದ್ಯಾರ್ಥಿಗಳು, ಸಮಾಜ ವಿಜ್ಞಾನ–14, ವಿಜ್ಞಾನ ಮತ್ತು ತಂತ್ರಜ್ಞಾನ–27, ವಾಣಿಜ್ಯ–6, ಶಿಕ್ಷಣ–4 ಹಾಗೂ ಕಾನೂನು ವಿಭಾಗದಲ್ಲಿ ಒಬ್ಬ ವಿದ್ಯಾರ್ಥಿಗೆ ಚಿನ್ನದ ಪದಕ ನೀಡಲಾಗುವುದು. ಚಿನ್ನದ ಪದಕ ಇರದ ವಿಷಯಗಳಲ್ಲಿ ಉತ್ತಮ
ಸಾಧನೆ ಮಾಡಿದ ನಾಲ್ವರು ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಗುವುದು’ ಎಂದು ಅವರು ತಿಳಿಸಿದರು.

‘ರಾಜ್ಯಪಾಲರಿಗೆ ನಿಗದಿತ ದಿನಾಂಕ ನೀಡುವಂತೆ ಕೋರಿದ್ದೆವು. ಆದರೆ, ಕೋವಿಡ್‌ ಕಾರಣದಿಂದ ಅವರು ಬರಲು ಆಗುವುದಿಲ್ಲ ಎಂದು ರಾಜ್ಯಪಾಲರ ಕಚೇರಿ ತಿಳಿಸಿದೆ. ಗೌರವ ಡಾಕ್ಟರೇಟ್ ಬಯಸಿ ಬಂದಿದ್ದ ಒಟ್ಟು 20 ಅರ್ಜಿಗಳನ್ನು ತಜ್ಞರ ಸಮಿತಿಗೆ ಕಳಿಸಲಾಗಿತ್ತು. ಸಮಿತಿಯು ಮೂವರ ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರಿಗೆ ಸಲ್ಲಿಸಿತ್ತು. ಅವರ ಪೈಕಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರಿಗೆ ಮಾತ್ರ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ಒಪ್ಪಿಗೆ ಸೂಚಿಸಿದರು’ ಎಂದು ಅವರು ತಿಳಿಸಿದರು.‌

ಕುಲಸಚಿವ ಪ್ರೊ.ಸಿ.ಸೋಮಶೇಖರ್, ಮೌಲ್ಯಮಾಪನ ಕುಲಸಚಿವ ಪ್ರೊ. ಸಂಜೀವಕುಮಾರ್, ಹಣಕಾಸು ಅಧಿಕಾರಿ
ಡಾ. ಬಿ. ವಿಜಯ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎಚ್‌.ಟಿ. ಪೋತೆ ಇದ್ದರು.

ಜಯಶ್ರೀ ಶಿವಶರಣಪ್ಪಗೆ 11 ಚಿನ್ನದ ಪದಕ

ಕನ್ನಡ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ಜಯಶ್ರೀ ಶಿವಶರಣಪ್ಪ ಅವರು 11 ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಘಟಿಕೋತ್ಸವದಲ್ಲಿ ಅತ್ಯಂತ ಹೆಚ್ಚು ಚಿನ್ನ ಪಡೆದ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಪ್ರಾಣಿವಿಜ್ಞಾನ ವಿಭಾಗದ ಶ್ವೇತಾ ದೊಡ್ಡಮನಿ–9, ಮ್ಯಾನೇಜ್‌ಮೆಂಟ್ ವಿಭಾಗದ ಸೌಮ್ಯ ಬಿರಾದಾರ–8, ಸೂಕ್ಷ್ಮಜೀವಿಶಾಸ್ತ್ರ ವಿಭಾಗದ ಅರುಣಜ್ಯೋತಿ ಬಸವರಾಜ–7, ರಾಜ್ಯಶಾಸ್ತ್ರ ವಿಭಾಗದ ಬಸವಲಿಂಗಪ್ಪ ದುರ್ಗಪ್ಪ–5, ಸಮಾಜ ಕಾರ್ಯ ವಿಭಾಗದ ಅಲ್ಮಸ್ ಮಹ್ಮದ್ ಉಸ್ಮಾನ್ ಅಲಿ–5, ಸಸ್ಯಶಾಸ್ತ್ರ ವಿಭಾಗದ ಜುಹಿ ಸಿಮ್ರನ್–5, ಪಲ್ಲ ಮೇಘನಾ–5, ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಿಯಾಂಕಾ–5, ಬಿ.ಕಾಂ.ನಲ್ಲಿ ಶ್ರೀದೇವಿ ಕೆ. ಶ್ರೀನಿವಾಸ–5, ಉರ್ದು ವಿಭಾಗದ ಯಾಸ್ಮಿನ್ ಬಾನು–4, ಸಮಾಜಶಾಸ್ತ್ರ ವಿಭಾಗದ ರೇಣುಕಾ ತಿಪ್ಪಣ್ಣ–4, ಜೈವಿಕ ತಂತ್ರಜ್ಞಾನ ವಿಭಾಗದ ನಿಂಬಾರ್ಕ ನಿಖಿತಾ ಮಹೇಂದ್ರಕುಮಾರ್–4, ರಸಾಯನ ವಿಭಾಗದ ವಿಭಾಗದ ಪ್ರಜಾಕತಾ ವಿಠ್ಠಲರಾವ–4, ಗಣಿತ ವಿಭಾಗದ ಸಯೀದಾ ಶಶಿಷ್ಠ ಸೈಯದ್ ಇಕ್ಬಾಲ್–4 ಹಾಗೂ ಭೌತವಿಜ್ಞಾನ ವಿಭಾಗದಲ್ಲಿ ಹರ್ಷಿತಾ ಸುರೇಶ ಬಾಬುಜಿ 4 ಚಿನ್ನದ ಪದಕಗಳಿಗೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT