ಕಲಬುರಗಿ: ನಗರದ ಜಾಜಿ ಶಿಕ್ಷಣ ಸಂಸ್ಥೆಯ ಗುರುಕುಲ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ.

ಪರೀಕ್ಷೆಗೆ ಹಾಜರಾದ ಒಟ್ಟು 69 ವಿದ್ಯಾರ್ಥಿಗಳಲ್ಲಿ 48 ಮಂದಿ ಉನ್ನತ ಶ್ರೇಣಿಯಲ್ಲಿ ಪಾಸ್ ಆಗಿದ್ದಾರೆ. 20 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಶಾಲೆಯ ಒಟ್ಟಾರೆ ಫಲಿತಾಂಶ ಶೇ 98.5ರಷ್ಟಾಗಿದೆ.

11 ವಿದ್ಯಾರ್ಥಿಗಳು ಕನ್ನಡದಲ್ಲಿ (ದ್ವಿತೀಯ ಭಾಷೆ), 6 ಮಕ್ಕಳು ಹಿಂದಿಯಲ್ಲಿ (ತೃತೀಯ ಭಾಷೆ), ಗಣಿತ ಮತ್ತು ವಿಜ್ಞಾನದಲ್ಲಿ ತಲಾ ನಾಲ್ವರು ಸೇರಿದಂತೆ ಒಟ್ಟು 27 ವಿದ್ಯಾರ್ಥಿಗಳು ವಿಷಯವಾರು ಶೇ 100ರಷ್ಟು ಅಂಕ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿನಿ ಸಾರಾ ಕೆರೋಲಿನ್ 616 ಅಂಕಗಳೊಂದಿಗೆ ಶಾಲೆಗೆ ಪ್ರಥಮ, ಶಿವಾನಿ ಸಂತೋಷ ಅಮ್ಮಣ್ಣ 615 ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಹಾಗೂ ಪ್ರಾಚೀತಾ ಪ್ರವೀಣ ಮಳ್ಳಿ 613 ಅಂಕಗಳೊಂದಿಗೆ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ನಿರ್ದೇಶಕರಾದ ಅಮೋಘ ಜಾಜಿ, ಅಮಯ ಹಾಗೂ ಪ್ರಾಂಶುಪಾಲ ಸಂತೋಷ ಕುಲಕರ್ಣಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.