ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ಜಿಲ್ಲೆಯಲ್ಲಿ ಭಾರಿ ಮಳೆ | ಹೇರೂರ(ಬಿ)ಗ್ರಾಮ ಸಿಎಂ ವಾಸ್ತವ್ಯ ಮುಂದೂಡಿಕೆ

ಜನತಾದರ್ಶನಕ್ಕೆ ಹಾಕಿದ್ದ ಪೆಂಡಾಲ್ ಮಳೆಗೆ ಹಾಳಾಗಿದೆ
Last Updated 21 ಜೂನ್ 2019, 20:18 IST
ಅಕ್ಷರ ಗಾತ್ರ

ಕಲಬುರ್ಗಿ​:ಜಿಲ್ಲೆಯಲ್ಲಿ ಭಾರಿ ಮಳೆಯ ಪ್ರಯುಕ್ತ ಜೂನ್‌ 22ರಂದು ಹೇರೂರ (ಬಿ) ಗ್ರಾಮದಲ್ಲಿ ನಡೆಯಬೇಕಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಅವರಜನಸ್ಪಂದನ ಹಾಗೂ ಗ್ರಾಮವಾಸ್ತವ್ಯಕಾರ್ಯಕ್ರಮ ಮುಂದೂಡಲಾಗಿದೆ.

ಮುಂದಿನ ಗ್ರಾಮ ವಾಸ್ತವ್ಯ ದಿನಾಂಕವನ್ನು ಮುಖ್ಯಮಂತ್ರಿನಿಗದಿಪಡಿಸಿ ತಿಳಿಸುತ್ತಾರೆ ಎಂದುಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ.ಖರ್ಗೆ ಅವರು ತಿಳಿಸಿದ್ದಾರೆ.

ಮಳೆಗೆ ಪೆಂಡಾಲ್ ಹಾಳಾಗಿದೆ.
ಮಳೆಗೆ ಪೆಂಡಾಲ್ ಹಾಳಾಗಿದೆ.
ಉತ್ತರ ಕರ್ನಾಟಕದ ಊಟ ಸವಿದ ಸಿಎಂ
ಉತ್ತರ ಕರ್ನಾಟಕದ ಊಟ ಸವಿದ ಸಿಎಂ

ಉತ್ತರ ಕರ್ನಾಟಕದ ಊಟ ಸವಿದ ಸಿಎಂ

ಯಾದಗಿರಿ:ಚಂಡರಕಿಯಲ್ಲಿ ಜನತಾ ದರ್ಶನ, ಅಹವಾಲು ಸ್ವೀಕಾರ, ಪತ್ರಿಕಾ ಗೋಷ್ಠಿ ಮುಗಿಸಿಕೊಂಡು, ಬೆಳಗ್ಗೆಯಿಂದ ಊಟಮಾಡದೆ ಕುಳಿತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ಊಟ ಸವಿದರು.

ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ತೆರಳಿದ ಸಿಎಂ ಊಟಕ್ಕಾಗಿ ಹೈದರಾಬಾದ್ ಕರ್ನಾಟಕ ಭಾಗದ ಗೋದಿ ಹುಗ್ಗಿ, ಪುಂಡೆಪಲ್ಲೆ, ಹಾಲು ಕುರ್ಮಾ, ಫುಲ್ಕಾ, ಖಡಕ್ ಜೋಳದ ರೊಟ್ಟಿ, ಬಿಳಿ ಅನ್ನ, ಮಿರ್ಚಿ ಭಜ್ಜಿಯನ್ನು ಸವಿದರು.

ಚಂಡರಕಿ ಶಾಲಾ ಮಕ್ಕಳಿಂದ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿ ಶಾಲಾ ಮಕ್ಕಳೊಂದಿಗೆ ರಾತ್ರಿಯ ಭೋಜನ ಸೇವಿಸಿದರು. ಈ ಸಂದರ್ಭದಲ್ಲಿ ಸಚಿವರಾದ ರಾಜಶೇಖರ ಪಾಟೀಲ, ಬಂಡೆಪ್ಪ ಖಾಶಂಪೂರ, ವೆಂಕಟರಾವ ನಾಡಗೌಡ, ಶಾಸಕ ನಾಗನಗೌಡ ಕಂದಕೂರ, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಜಿಪಂ‌ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕವಿತಾ ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT