ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣಬಸವ ವಿ.ವಿ: ಸ್ವಾತಂತ್ರ್ಯ ಸಡಗರ

ವೈಭವದ ಸ್ವಾತಂತ್ರ್ಯ ದಿನಾಚರಣೆ, ವಿಜೇತರಿಗೆ ಬಹುಮಾನ, ಸಾಧಕರಿಗೆ ಸನ್ಮಾನ, ಆಕರ್ಷಕ ಪರೇಡ್‌
Last Updated 16 ಆಗಸ್ಟ್ 2021, 4:00 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಶರಣಬಸವ ವಿಶ್ವವಿದ್ಯಾಲಯ ಮತ್ತು ಶರಣಬಸವೇಶ್ವರ ವಿಧ್ಯಾವರ್ಧಕ ಸಂಘದ ವತಿಯಿಂದ ಶರಣಬಸವ ವಿಶ್ವವಿದ್ಯಾಲಯದ ಮೈದಾನದಲ್ಲಿ ಭಾನುವಾರ 75ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು.

‌ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಹಾಗೂ ಚಿರಂಜೀವಿ ದೊಡ್ಡಪ್ಪ ಅಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಡಾ.ದಾಕ್ಷಾಯಿಣಿ ಅವ್ವ, ಶಿವಾನಿ ಎಸ್. ಅಪ್ಪ, ಕೋಮಲಾ ಎಸ್. ಅಪ್ಪ ಮತ್ತು ಮಹೇಶ್ವರಿ ಎಸ್. ಅಪ್ಪ ಅವರು ಆಕರ್ಷಣೆಯ ಕೇಂದ್ರವಾಗಿದ್ದರು.

ಆರಂಭದಲ್ಲಿ ವಿಶ್ವವಿದ್ಯಾಲಯದ ಎನ್‌ಸಿಸಿ ಕೆಡೆಟ್‍ಗಳ ಗೌರವ ವಂದನೆಯನ್ನು ಸ್ವೀಕರಿಸಿದ ಡಾ.ಅಪ್ಪ ಅವರು ನಂತರ ಧ್ವಜಾರೋಹಣ ನೆರವೇರಿಸಿದರು. ನಂತರ ಎನ್‍ಸಿಸಿ ಕೆಡೆಟ್‍ಗಳು, ಎನ್ಎಸ್ಎಸ್ ಸ್ವಯಂಸೇವಕರು ಮತ್ತು ಆಕರ್ಷಕ ಮೆರವಣಿಗೆಯಲ್ಲಿ ಗೌರವ ವಂದನೆ ಸ್ವೀಕರಿಸಿದರು.

ದೀನ, ದಮನಿತರ ಮತ್ತು ಖಿನ್ನತೆಗೆ ಒಳಗಾದ ಸಮುದಾಯಗಳ ಉನ್ನತಿಗಾಗಿ ಶ್ರಮಿಸಿದ್ದಕ್ಕಾಗಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯು ಸ್ಥಾಪಿಸಿದ ಡಾ.ಅಂಬೇಡ್ಕರ್‌ ರಾಷ್ಟ್ರೀಯ ಫೆಲೋಷಿಪ್ ಪಡೆದ ಶರಣಬಸವೇಶ್ವರ ಕಲಾ ಕಾಲೇಜಿನ ವಿದ್ಯಾರ್ಥಿ ನರಸಿಂಹಲು ರಾಮಪ್ಪ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸರ್ಕಾರ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಏಕೀಕರಣ ಶಿಬಿರದಲ್ಲಿ ಚಿನ್ನದ ಪದಕ ಗೆದ್ದ ಎಂ.ಎಸ್. ಫಾತಿಮಾ ಅಂಜುಮ್ ಮತ್ತು ಪ್ರತೀಕ್ಷಾ ಶಿಂಧೆ ಅವರನ್ನೂ ಗೌರವಿಸಲಾಯಿತು.

‘ಹೇರ್ ಸ್ಟೈಲಿಂಗ್’ ಸ್ಪರ್ಧೆಯಲ್ಲಿ ಪ್ರಥಮ ಬಂದ ಅಂಜುಮ್, ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ಪ್ರಥಮ ಬಂದ ಶಿಂಧೆ ಅವರಿಗೆ ಬಹುಮಾನ ನೀಡಲಾಯಿತು.

ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಚಂದ್ರಶೇಖರ್ ನರಕೆ, ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ ವಿ. ನಿಷ್ಠಿ, ಸಮಕುಲಪತಿಗಳಾದ ಪ್ರೊ.ವಿ.ಡಿ. ಮೈತ್ರಿ ಮತ್ತು ಎನ್.ಎಸ್. ದೇವರಕಲ್‌, ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಕುಲಸಚಿವ (ಮೌಲ್ಯಮಾಪನ) ಡಾ.ಲಿಂಗರಾಜ ಶಾಸ್ತ್ರಿ, ಹಣಕಾಸು ಅಧಿಕಾರಿ ಪ್ರೊ.ಕಿರಣ್ ಮಾಕಾ, ಡೀನ್ ಡಾ.ಲಕ್ಷ್ಮೀ ಪಾಟೀಲ ಮಾಕಾ ಮತ್ತು ಡಾ.ಬಸವರಾಜ ಮಠಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT