ವಾಡಿ (ಕಲಬುರಗಿ ಜಿಲ್ಲೆ): ಚಿತ್ತಾಪುರ ತಾಲ್ಲೂಕಿನ ಇಂಗಳಗಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ದೊಡ್ಡ ಪ್ರಮಾಣದ ನಿಗೂಢ ಸ್ಫೋಟದ ಸದ್ದು ಕೇಳಿಬಂದಿದ್ದು, ಗ್ರಾಮದ ಜನ ಬೆಚ್ಚಿಬಿದ್ದಿದ್ದಾರೆ. ಸ್ಫೋಟದ ಸದ್ದಿಗೆ ಜನರಲ್ಲಿ ಆತಂಕ ಮನೆ ಮಾಡಿದೆ.

ರಾತ್ರಿ 8.55ಕ್ಕೆ ಟೈರ್ ಸ್ಫೋಟಗೊಂಡ ರೀತಿಯಲ್ಲಿ ದೊಡ್ಡ ಶಬ್ದ ಹೊರಹೊಮ್ಮಿದೆ. ಆರಂಭದಲ್ಲಿ ಮನೆಯ ಅಕ್ಕಪಕ್ಕ ಶಬ್ದ ಬಂದಿರಬಹುದು ಎಂದು ಸುಮ್ಮನಿದ್ದರು. ನಂತರ ಇಡೀ ಗ್ರಾಮಕ್ಕೆ ಸದ್ದು ಕೇಳಿಸಿದೆ. ಏನಿದು ಸ್ಫೋಟ ಎಂದು ಮನೆಯಿಂದ ಹೊರ ಬಂದು ಆತಂಕ ವ್ಯಕ್ತಪಡಿಸಿದರು.

‘ಇಂತಹ ಶಬ್ದ ನಾವು ಹಿಂದೆ ಎಂದೂ ಕೇಳಿರಲಿಲ್ಲ. ಪಕ್ಕದ ಗಣಿ ಸ್ಫೋಟದ ಸದ್ದು ಇದಲ್ಲ. ಏನಾಗಿರಬಹುದು’ ಎಂದು ಗ್ರಾಮಸ್ಥರು ಪರಸ್ಪರ ಚರ್ಚಿಸುತ್ತಿದ್ದರು. ಸಾಮಾಜಿಕ ಜಾಲತಾಣ, ವಾಟ್ಸ್ಆ್ಯಪ್ನಲ್ಲೂ ಈ ಬಗ್ಗೆ ಚರ್ಚೆಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.