ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಐಪಿಎಸ್‌–ಕೆಸಿಗೆ ಡಾ.ಸೋಮಶೇಖರ ಅಧ್ಯಕ್ಷ

Published : 26 ಆಗಸ್ಟ್ 2024, 0:24 IST
Last Updated : 26 ಆಗಸ್ಟ್ 2024, 0:24 IST
ಫಾಲೋ ಮಾಡಿ
Comments

ಕಲಬುರಗಿ: ಭಾರತೀಯ ಮನೋ ವೈದ್ಯಕೀಯ ಸಂಸ್ಥೆಯ ಕರ್ನಾಟಕ ಘಟಕಕ್ಕೆ (ಐಪಿಎಸ್‌–ಕೆಸಿ) ನೂತನ ಪದಾಧಿಕಾರಿಗಳನ್ನು ಘೋಷಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ಗದಗಿನ ಜಿಮ್ಸ್‌ನ ಪ್ರಾಧ್ಯಾಪಕ ಡಾ.ಸೋಮಶೇಖರ ಬಿಜ್ಜಳ ಆಯ್ಕೆಯಾಗಿದ್ದಾರೆ.

ಕಲ್ಯಾಣ ಕರ್ನಾಟಕ ಮನೋವೈದ್ಯರ ಸಂಘ (ಕೆಕೆಪಿಜಿ)ದ ನಗರದಲ್ಲಿ ಆಶ್ರಯದಲ್ಲಿ ಹಮ್ಮಿಕೊಂಡ ‘ಕ್ಯಾನ್‌ಸಿಪ್ಸ್‌–2024’ ಸಮ್ಮೇಳನದಲ್ಲಿ ಭಾನುವಾರ ಈ ಕುರಿತು ಘೋಷಣೆ ಮಾಡಲಾಯಿತು. ಇದೇ ವೇಳೆ, 2025ರ ಕ್ಯಾನ್‌ಸಿಪ್ಸ್‌ ಸಮ್ಮೇಳನವನ್ನು ಚಿಕ್ಕಮಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಯಿತು.

ನೂತನ ಪದಾಧಿಕಾರಿಗಳು:

ಐಪಿಎಸ್‌– ಅಧ್ಯಕ್ಷರಾಗಿ ಡಾ.ಸೋಮಶೇಖರ ಬಿಜ್ಜಳ (ಗದಗ), ನಿಯೋಜಿತ ಅಧ್ಯಕ್ಷರಾಗಿ ಡಾ.ಅನಿಲಕುಮಾರ್‌ ಎಂ.ಎನ್‌. (ಮಣಿಪಾಲ), ಗೌರವ ಕಾರ್ಯದರ್ಶಿಯಾಗಿ ಡಾ.ನಾರಾಯಣ ಮುತಾಲಿಕ್‌ (ಬಾಗಲಕೋಟೆ), ಜಂಟಿ ಕಾರ್ಯದರ್ಶಿಯಾಗಿ ಡಾ.ಸುರೇಶ ವಿ.ಸಿ. (ಚಿಕ್ಕಬಳ್ಳಾಪುರ), ಖಜಾಂಚಿಯಾಗಿ ಡಾ.ಅಲೋಕ ಘನಾತೆ (ಕಲಬುರಗಿ) ಆಯ್ಕೆಯಾಗಿದ್ದಾರೆ.

ಆಡಳಿತ ಮಂಡಳಿ ಸದಸ್ಯರಾಗಿ ಡಾ.ಲೋಕೇಶ ಬಾಬು (ತುಮಕೂರು), ಡಾ.ಅಭಿಜಿತ ಎಚ್‌. (ಮೈಸೂರು), ಡಾ.ಸುಪ್ರಿಯಾ ಹೆಗ್ಡೆ ಆರೂರ (ಮಂಗಳೂರು), ಡಾ.ರಾಹುಲ್‌ ಮಂದಾಕನಳ್ಳಿ (ಕಲಬುರಗಿ), ಡಾ.ಸಮೀರ್‌  (ಹುಬ್ಬಳ್ಳಿ), ಡಾ.ಶಶಿಧರ ಬೀಳಗಿ (ಬೆಂಗಳೂರು) ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳ ಅಧಿಕಾರಾವಧಿ ಒಂದು ವರ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT