ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಜಿ ಸಂಸದ ಇಕ್ಬಾಲ್ ಅಹಮದ್ ಸರಡಗಿ ಅಂತ್ಯಕ್ರಿಯೆ

Published 22 ಮೇ 2024, 15:28 IST
Last Updated 22 ಮೇ 2024, 15:28 IST
ಅಕ್ಷರ ಗಾತ್ರ

ಕಲಬುರಗಿ: ವಯೋಸಹಜ ಅನಾರೋಗ್ಯದಿಂದ ಮಂಗಳವಾರ ತಡರಾತ್ರಿ ನಿಧನರಾದ ಮಾಜಿ ಸಂಸದ ಇಕ್ಬಾಲ್ ಅಹಮದ್ ಸರಡಗಿ (80) ಅವರ ಅಂತ್ಯಕ್ರಿಯೆಯು ಇಲ್ಲಿನ ಹಫ್ತ್ ಗುಂಬಜ್ ಸಮೀಪದ ಮಕ್‌ಬರ್ ಖಬರಸ್ತಾನದಲ್ಲಿ ಬುಧವಾರ ಜರುಗಿತು.

ಇದಕ್ಕೂ ಮುನ್ನ ಇಕ್ಬಾಲ್ ಅವರ ನಿವಾಸದಲ್ಲಿ ಪುತ್ರ ಇರ್ಫಾನ್ ಇಕ್ಬಾಲ್ ಅಹಮದ್ ಹಾಗೂ ಕುಟುಂಬದ ಸದಸ್ಯರು ಧಾರ್ಮಿಕ ವಿಧಿ–ವಿಧಾನ ನೆರವೇರಿಸಿದರು. ನಂತರ ದರ್ಗಾ ರಸ್ತೆಯ ನ್ಯಾಷನಲ್‌ ಶಾಲೆಯ ಆವರಣದಲ್ಲಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಅಂತಿಮ ದರ್ಶನಕ್ಕೆ ಬಂದಿದ್ದ ಸಮುದಾಯದವರು ಸಂಜೆ 5.40ಕ್ಕೆ ನಮಾಜ್–ಇ–ಜನಾಜ್ (ಪ್ರಾರ್ಥನೆ) ಸಲ್ಲಿಸಿದರು.

ಇಕ್ಬಾಲ್ ಅವರ ಸಹಪಾಠಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಡಾ.ಶರಣಪ್ರಕಾಶ ಪಾಟೀಲ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು. ಬಳಿಕ ಮಕ್‌ಬರ್ ಖಬರಸ್ತಾನದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.

ನಾಲ್ಕೂವರೆ ದಶಕಗಳ ರಾಜಕೀಯ ಜೀವನದಲ್ಲಿ ಎರಡು ಬಾರಿ ಲೋಕಸಭೆಗೆ (1999 ಮತ್ತು 2004) ಮತ್ತು ಒಂದು ಬಾರಿ ವಿಧಾನಪರಿಷತ್ತಿಗೆ (2014) ಆಯ್ಕೆಯಾಗಿದ್ದರು. ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಆಲ್ ಇಂಡಿಯಾ ಹಜ್‍ಕಮಿಟಿ, ವಕ್ಫ್ ಬೋರ್ಡ್, ಪಾರ್ಲಿಮೆಂಟರಿ ಜಂಟಿ ಸಮಿತಿಯ ಮುಖ್ಯಸ್ಥರೂ ಆಗಿದ್ದರು. 2012ರ ಜೂನ್‌ನಲ್ಲಿ ನಡೆದ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನದಿಂದಾಗಿ ಇಕ್ಬಾಲ್ ಅವರು ಸೋಲು ಅನುಭವಿಸಿದ್ದರು.

ಅವರಿಗೆ ಪತ್ನಿ ಸಬಿಹಾ ಬೇಗಂ, ಪುತ್ರ ಇರ್ಫಾನ್ ಮತ್ತು ಪುತ್ರಿ ಡಾ.ಜಹೇರಾ ಸರಡಗಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT