ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ವ್ಯಾಪಾರವಲ್ಲ, ಸೇವೆ: ಸುಭಾಷ ಬಿರಾದಾರ

ಕಮಲಾಪುರ: 200 ಜನರಿಗೆ ಉಚಿತ ಆರೋಗ್ಯ ತಪಾಸಣೆ
Last Updated 9 ಡಿಸೆಂಬರ್ 2021, 11:14 IST
ಅಕ್ಷರ ಗಾತ್ರ

ಕಮಲಾಪುರ: ’ವೈದ್ಯಕೀಯ ವೃತ್ತಿ ಲಾಭದಾಯಕ ವ್ಯಾಪಾರವನ್ನಾಗಿಸದೆ ಸೇವೆ ಎಂದೇ ಪರಿಗಣಿಸಬೇಕು‘ ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸುಭಾಷ ಬಿರಾದಾರ ತಿಳಿಸಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು. ’ಹೊಸದಾಗಿ ವೈದ್ಯಕೀಯ ಪದವಿ ಪಡೆದವರು ನಗರಗಳಲ್ಲಿ ಆಸ್ಪತ್ರೆ ತೆರೆದು ದುಡ್ಡು ಮಾಡಲು ಹವಣಿಸಬಾರದು. ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲಿ ಬಡ ಜನರಿಗೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡುವ ಮೂಲಕ ಸೇವಾ ಮನೋಭಾವ ಮೆರೆಯಬೇಕು. ಆಗಾಗ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಿಬೇಕು. ವೈದ್ಯರು ದೇವರ ಸ್ವರೂಪಿ ಎಂದು ಜನ ಭಾವಿಸುತ್ತಾರೆ. ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ನವೋದಯ ಸೂಪರ್‌ ಸ್ಪೇಷಾಲಿಟಿ ಸೆಂಟರ್‌ ಆಸ್ಪತ್ರೆಯವರು ಶಿಬಿರ ಆಯೋಜಿಸಿ ಗ್ರಾಮೀಣ ಜನರ ಸೇವೆಗೆ ಮುಂದಾಗಿರುವುದು ಪ್ರಶಂಸನೀಯ‘ ಎಂದರು.

ಕಮಲಾಪುರ ಸೇರಿದಂತೆ ವಿವಿಧ ಗ್ರಾಮ ಹಾಗೂ ತಾಂಡಾಗಳಿಂದ ಆಗಮಿಸಿದ್ದ 200 ಜನರಿಗೆ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು. ಸಕ್ಕರೆ ಕಾಯಿಲೆ ತಜ್ಞ ಡಾ.ಸಂತೋಷ ಎನ್‌ ಹಾರೂಕುಡೆ, ಹೃದ್ರೋಗ ತಜ್ಞ ಡಾ. ಶಂಕರಗೌಡ ಜಿ.ಎಚ್‌, ಶ್ವಾಸಕೋಶ ತಜ್ಞ ಶ್ರೀಕಾಂತ ದುರ್ಗೆ, ನೇತ್ರ ತಜ್ಞೆ ವಂದನಾ ಕಾಮಶೆಟ್ಟಿ, ಶೃತಿ ಬಿರಾದಾರ, ಪುಂಡಲೀಕರಾವ ಚಿರಡೆ, ವಿಜಯಕುಮಾರ ರಟಕಲ್‌, ಅಮೃತ ಗೌರೆ, ಅರುಣ ಧಮ್ಮೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT