ಬುಧವಾರ, ಜುಲೈ 28, 2021
23 °C

ಜೆಡಿಎಸ್‌ ಪ್ರತಿ ವಿಭಾಗದಿಂದ 10 ಸಾವಿರಸದಸ್ಯತ್ವ ನೋಂದಣಿಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜೆಡಿಎಸ್‌ ಜಿಲ್ಲಾ ಘಟಕದಿಂದ ಪ್ರತಿ ವಿಭಾಗದಿಂದಲೂ ತಲಾ 10 ಸಾವಿರ ಸದಸ್ಯತ್ವ ನೋಂದಣಿ ಮಾಡುವ ಕುರಿತು, ನಗರದಲ್ಲಿ ಶನಿವಾರ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಯಿತು.

ಜೆಡಿಎಸ್‌ ಸದಸ್ಯತ್ವ ನೋಂದಣಿ ಕುರಿತು ಪಕ್ಷದ ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ್ ಸೂರನ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲೆಯ ವಿವಿಧ ವಿಭಾಗಗಳ ಮುಖಂಡರು ಚರ್ಚೆ ನಡೆಸಿದರು. ನಗರ ಘಟಕ, ಗ್ರಾಮೀಣ ಘಟಕ, ಮಹಿಳಾ ವಿಭಾಗ, ಯುವ ಘಟಕ ಹೀಗೆ ಎಲ್ಲ ವಿಭಾಗಗಳ ಅಧ್ಯಕ್ಷರೂ ಸದಸ್ಯತ್ವ ನೋಂದಣಿಯ ಪಟ್ಟಿ ಮಾಡಿ ಜಿಲ್ಲಾ ಘಟಕಕ್ಕೆ ಸಲ್ಲಿಸಬೇಕು ಎಂದೂ ಸೂರನ್‌ ಮಾರ್ಗದರ್ಶನ ನೀಡಿದರು.

ಎಲ್ಲ ವಿಭಾಗಗಳ ವತಿಯಿಂದ ಪ್ರತಿ ತಾಲೂಕಿನಲ್ಲಿ ಪುರಸಭೆ, ನಗರ ಸಭೆಯಲ್ಲಿ ವಾರ್ಡ್ ಮತ್ತು ಬೂತ್ ಕಮಿಟಿ ಮಾಡಿ ಪಕ್ಷವನ್ನು ತಳಮಟ್ಟದಿಂದ ಸದೃಢಗೊಳಿಸಲು ತೀರ್ಮಾನಿಸಲಾಯಿತು. ಇದಕ್ಕಾಗಿ ಸಾಮಾಜಿಕ ಜಾಲತಾಣದ ಸದುಪಯೋಗ ಮಾಡಿಕೊಳ್ಳಬೇಕು. ಜನಪರ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲು ನಿರ್ಧರಿಸಲಾಯಿತು.

ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶೇಖ್‌ ಮೈನುದ್ದಿನ್, ಎಂ.ಡಿ.ಅಲೀಂ ಇನಾಮದಾರ, ಗುರುನಾಥ ಪೂಜಾರಿ, ಭೀಮರಾಜ ಜನಿವಾರ, ವಿದ್ಯಾಧರ ಹುಗ್ಗಿ, ನರಸಯ್ಯ ಗುತ್ತೇದಾರ, ಪಾರ್ವತಿ ಪುರಾಣಿಕ ಮಾತನಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು