ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ಜೆಇಇಯಲ್ಲಿ ವಿನಾಯಕ ಸಾಧನೆ

Published 13 ಜೂನ್ 2024, 13:56 IST
Last Updated 13 ಜೂನ್ 2024, 13:56 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಶ್ರೀಗುರು ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಜೆಇಇ(ಅಡ್ವಾನ್ಸಡ್‌)–2024 ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಕಾಲೇಜಿನ ವಿದ್ಯಾರ್ಥಿ ವಿನಾಯಕ ಆರ್‌. ಅಖಿಲ ಭಾರತ ಮಟ್ಟದಲ್ಲಿ 1,087ನೇ ರ್‍ಯಾಂಕ್‌ ಪಡೆದಿದ್ದಾರೆ. ಮೊಹಮ್ಮದ್ ಜೊಯಬ್‌ ಆಗ್ರಾ 3,600ನೇ ರ‍್ಯಾಂಕ್‌ ಹಾಗೂ ಶ್ರೇಯಾ ಎಸ್‌.ಮತ್ತಿಮಡು 5,009ನೇ ರ್‍ಯಾಂಕ್ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷೆ ನಳಿನಿ ಎ.ನಾಯ್ಕ್, ಕಾರ್ಯದರ್ಶಿ ನಿತೀನ ನಾಯ್ಕ್, ಆಡಳಿತಾಧಿಕಾರಿ ನೇಹಾ ಎನ್.ನಾಯ್ಕ್, ಸದಸ್ಯ ಗುರುರಾಜ ನಾಯ್ಕ್, ಕಾಲೇಜಿನ ಪ್ರಾಚಾರ್ಯ ವಿದ್ಯಾಸಾಗರ ಗೋಗಿ, ಕಾಲೇಜಿನ ಬೋಧಕ– ಬೋಧಕೇತರ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೊಹ್ಮದ್‌ ಜೊಯೆಬ್‌ ಆಗ್ರಾ
ಮೊಹ್ಮದ್‌ ಜೊಯೆಬ್‌ ಆಗ್ರಾ
ಶ್ರೇಯಾ ಮತ್ತಿಮಡು
ಶ್ರೇಯಾ ಮತ್ತಿಮಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT