ಜೇವರ್ಗಿ: ತಾಲ್ಲೂಕಿನ ಆಂದೋಲಾ ಗ್ರಾಮ ಪಂಚಾಯಿತಿ ಅದ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಶ್ರೀದೇವಿ ಶಿವಕುಮಾರ ಗೋಲಾ ಅಧ್ಯಕ್ಷೆಯಾಗಿ ಹಾಗೂ ದೊಡ್ಡಪ್ಪ ಅಂಗಡಿ ಉಪಾಧ್ಯಕ್ಷರಾಗಿ ಗೆಲುವು ಸಾಧಿಸಿದ್ದಾರೆ

ಆಂದೋಲಾ ಗ್ರಾ.ಪಂ ನಲ್ಲಿ ಒಟ್ಟು 18 ಜನ ಸದಸ್ಯರಿದ್ದು, ಇತ್ತೀಚೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬಸಮ್ಮ ಮಾಚಣ್ಣ ಶಹಾಪೂರ, ಶರಭಯ್ಯ ನಾಯ್ಕಲ್ ರಾಜೀನಾಮೆ ನೀಡಿದ್ದರು. ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶ್ರೀದೇವಿ ಗೋಲಾ ಹಾಗೂ ಕಸ್ತೂರಿಬಾಯಿ ಕಲ್ಯಾಣಪ್ಪ ಜಡೀಂದ್ರ, ಉಪಾಧ್ಯಕ್ಷ ಸ್ಥಾನಕ್ಕೆ ದೊಡ್ಡಪ್ಪ ಅಂಗಡಿ, ಆರೀಫ್ ಜಮಾದಾರ ನಾಮಪತ್ರ ಸಲ್ಲಿಸಿದ್ದರು.

ಶ್ರೀದೇವಿ 10 ಮತ ಪಡೆದು ಜಯಶಾಲಿಯಾದರು. ಕಸ್ತೂರಿಬಾಯಿ -6 ಮತಗಳ ಪಡೆದು ಪರಾಭವಗೊಂಡರು. 2 ಮತಗಳು ತಿರಸ್ಕೃತ ಗೊಂಡವು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ದೊಡ್ಡಪ್ಪ ಅಂಗಡಿ-11 ಮತಗಳು ಪಡೆದು ಜಯಶಾಲಿಯಾದರು. ಆರೀಫ್-7 ಮತಗಳನ್ನು ಪಡೆದು ಪರಾಭವಗೊಂಡರು ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಹಶೀಲ್ದಾರ್ ಮಲ್ಲಣ್ಣ ಯಲಗೋಡ ತಿಳಿಸಿದರು.

ವಿಜಯೋತ್ಸವ: ಜೆಡಿಎಸ್ ಬೆಂಬಲಿತರು ಅಧ್ಯಕ್ಷ-ಉಪಾಧ್ಯಕ್ಷರಾಗಿ ಗೆಲುವು ಸಾಧಿಸುತ್ತಿದ್ದಂತೆ ಗ್ರಾಪಂ ಹೊರಗೆ ವಿಜಯೋತ್ಸವ ಆಚರಿಸಲಾಯಿತು. ಜೆಡಿಎಸ್ ಮುಖಂಡರಾದ ಜಯಪ್ರಕಾಶ್ ಪಾಟೀಲ ನರಿಬೋಳ, ವಿಶ್ವನಾಥ ಇಮ್ಮಣ್ಣಿ, ಮಲ್ಲಣ್ಣ ತಳವಾರ, ಶರಣಪ್ಪ ಮಡ್ನಾಳ, ಪೀರಾಸಾಬ, ಕರಣು ಇಂಬಡಶೆಟ್ಟಿ, ಅಯ್ಯಣ್ಣ ಶಹಾಪೂರ, ಶಿವಕುಮಾರ ಗೋಲಾ, ಭೀಮು ಸುಣಗಾರ ಸೇರಿದಂತೆ ಹಲವಾರು ಜನ ಜೆಡಿಎಸ್ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.