ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಮಧ್ಯಾಹ್ನದ ಬಳಿಕ ಬಹುತೇಕ ಚಟುವಟಿಕೆ ಸ್ತಬ್ಧ

Last Updated 7 ಆಗಸ್ಟ್ 2021, 9:16 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ಇಂದಿನಿಂದ (ಶನಿವಾರ) ವಾರಾಂತ್ಯದ ಕರ್ಫ್ಯೂ ಜಾರಿಗೆ ತಂದಿದ್ದರಿಂದ ಮಧ್ಯಾಹ್ನ 2 ಗಂಟೆ ವೇಳೆಗೆ ಬಹುತೇಕ ವಾಣಿಜ್ಯ ಚಟುವಟಿಕೆಗಳು ಸ್ತಬ್ದಗೊಂಡವು. ಜನರ ಓಡಾಟ ವಿರಳವಾಯಿತು.

ಕರ್ಫ್ಯೂ ಆರಂಭವಾಗುತ್ತಿದ್ದಂತೆಯೇ ಪೊಲೀಸರು ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಇರಿಸಿ ಸಂಚಾರ ನಿಯಂತ್ರಿಸಿದರು.

ಸಂಚಾರ ಠಾಣೆ ಪೊಲೀಸರು ವಾಹನಗಳಲ್ಲಿ ಗಸ್ತು ನಡೆಸಿ ವಾಣಿಜ್ಯ ಮಳಿಗೆಗಳ ಬಾಗಿಲನ್ನು ಮುಚ್ಚಿಸಿದರು.

ನಗರದ ಏಷಿಯನ್ ಮಾಲ್ ಸೇರಿದಂತೆ ಹಲವು ಮಾಲ್‌ಗಳು ಬೆಳಿಗ್ಗೆಯಿಂದಲೇ ಮುಚ್ಚಿದ್ದವು. ಬಾಗಿಲು‌ ಮುಚ್ಚುವ ಸಮಯವಾದ್ದರಿಂದ ಮದ್ಯ ಪ್ರಿಯರು ಅಂಗಡಿಗಳಿಂದ ಕೇಸ್ ಗಟ್ಟಲೇ ಬಾಟಲ್‌ಗಳನ್ನು ಮದ್ಯವನ್ನು ಖರೀದಿಸಿದರು.

ಕಿರಾಣಿ ಅಂಗಡಿ, ಹೋಟೆಲ್, ಹಣ್ಣಿನ ಅಂಗಡಿ, ಕಟ್ಟಡ ಸಂಬಂಧಿ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳು ವಹಿವಾಟು ಮುಂದುವರಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT