ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಬರುವ ಹಾಗೂ ಇಲ್ಲಿಂದ ಹೊರಡುವ ಬಸ್ಗಳ ಸುಗಮ ಸಂಚಾರಕ್ಕಾಗಿ ಸಿಐಬಿ ಕಾಲೊನಿ ಭಾಗದಲ್ಲಿ ಮತ್ತೊಂದು ದ್ವಾರವನ್ನು ಸಾರ್ವಜನಿಕ ಸಂಚಾರಕ್ಕಾಗಿ ಸೋಮವಾರ ಮುಕ್ತಗೊಳಿಸಲಾಗಿದೆ.

ಕೇಂದ್ರ ಬಸ್ ನಿಲ್ದಾಣದಲ್ಲಿ ಇದುವರೆಗೆ ಎರಡು ದ್ವಾರಗಳಿದ್ದವು. ಹೊಸ ಜೇವರ್ಗಿ ರಸ್ತೆ ಕಡೆಯ ದ್ವಾರದಿಂದ ಬಸ್ಗಳು ಬರುತ್ತಿದ್ದವು. ಎಂಎಸ್ಕೆ ಮಿಲ್ಗೆ ಹೋಗುವ ಮಾರ್ಗದಲ್ಲಿ ನಿಲ್ದಾಣದಿಂದ ಹೊರಕ್ಕೆ ಹೋಗುತ್ತಿದ್ದವು. ಇದರಿಂದ ಸಂಚಾರ ದಟ್ಟಣಿ ಜಾಸ್ತಿಯಾಗುತ್ತಿತ್ತು. ಹೀಗಾಗಿ, ಸಿಐಬಿ ಕಾಲೊನಿ ಕಡೆಗೆ ಬಸ್ಗಳು ಹೊರಹೋಗಲಿವೆ.

ಕೇಂದ್ರ ಬಸ್ ನಿಲ್ದಾಣದಲ್ಲಿ ಹೊಸ ದ್ವಾರವನ್ನು ಶಾಸಕ ಅಲ್ಲಮಪ್ರಭು ಪಾಟೀಲ ಉದ್ಘಾಟಿಸಿದರು. ಈ ನಿಲ್ದಾಣದಿಂದ ಬಸ್ಗಳು ಒಳಮಾರ್ಗದಲ್ಲಿ ನೇರವಾಗಿ ಕಣ್ಣಿ ಮಾರ್ಕೆಟ್ ಮೂಲಕ ಸಂಚರಿಸಲಿವೆ.

ಪಾಲಿಕೆ ಮೇಯರ್ ವರ್ಷಾ ಜಾನೆ, ಪಾಲಿಕೆ ಸದಸ್ಯ ಸಚಿನ್ ಶಿರವಾಳ, ನಿಗಮದ ಅಧ್ಯಕ್ಷ ಅರುಣಕುಮಾರ್ ಎಂ. ಪಾಟೀಲ, ವ್ಯವಸ್ಥಾಪಕ ನಿರ್ದೇಶಕಿ ಡಾ.ಬಿ.ಸುಶೀಲಾ, ವಿಭಾಗೀಯ ನಿಯಂತ್ರಣಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಪ್ರಯಾಣಿಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.