ವಾರ್ಷಿಕ ಕ್ರಿಯಾ ಯೋಜನೆ ಮತ್ತು ಅಂದಾಜು ಪಟ್ಟಿ ಪರಿಶೀಲನಾ ಸಮಿತಿ ಅನುಮೋದನೆ ವಿಳಂಬವಾಗಿದೆ. ಮರು ಟೆಂಡರ್ ಕರೆದಿದ್ದೇವೆ. ಹೂಳು ತೆಗೆಯುವುದು ನಡಿಯುತ್ತಿದೆ.
– ಚೇತನ ಕಳಸ್ಕರ್, ಎಇಇ ಚಂದ್ರಂಪಳ್ಳಿ ನೀರಾವರಿ ಯೋಜನೆ ಚಿಂಚೋಳಿ
ಕಳೆದ ವರ್ಷ ನ.15ಕ್ಕೆ ಎರಡು ಬಾರಿ ಬೆಳೆಗಳಿಗೆ ನೀರುಣಿಸಿದ್ದೆವು. ಇದರಿಂದ ನನ್ನ ಹೊಲದಲ್ಲಿ 28 ಚೀಲ ಜೋಳ ಬೆಳೆಯಲಾಗಿತ್ತು. ಪ್ರಸಕ್ತ ವರ್ಷ ಒಮ್ಮೆಯೂ ನೀರು ಸಿಕ್ಕಿಲ್ಲ ಇದರಿಂದ ಜೋಳದ ಬೆಳೆ ಒಣಗಿ ನಿಂತಿದೆ.
– ಮಾಣಿಕ ಕೇಶು ಜಾಧವ, ಕಲಭಾ ವಿ ರೈತ
ಚಂದ್ರಂಪಳ್ಳಿ ನೀರಾವರಿ ಯೋಜನೆ ಮುಖ್ಯ ಕಾಲುವೆ ಹಾಗೂ ವಿತರಣ ನಾಲೆಗಳು ಸಂಪೂರ್ಣ ಹಾಳಾಗಿವೆ. ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಈ ಕುರಿತು ಗಂಭೀರತೆ ಇಲ್ಲ.