ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟಿಸ್ ನೀಡುವಂತೆ ಮೇಯರ್ ಆದೇಶ

ಲೆಕ್ಕ ಸ್ಥಾಯಿ ಸಮಿತಿ ಸಭೆಗೆ ಅಧಿಕಾರಿಗಳು, ಸಿಬ್ಬಂದಿ ಗೈರು
Published 12 ಸೆಪ್ಟೆಂಬರ್ 2023, 4:46 IST
Last Updated 12 ಸೆಪ್ಟೆಂಬರ್ 2023, 4:46 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯ ಸಭಾಭವನದಲ್ಲಿ ಸೋಮವಾರ ಕರೆದಿದ್ದ ಲೆಕ್ಕಸ್ಥಾಯಿ ಸಮಿತಿಯ ಸಭೆಗೆ ಗೈರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನೋಟಿಸ್ ನೀಡುವಂತೆ ಮೇಯರ್ ವಿಶಾಲ್ ದರ್ಗಿ ಅವರು ಆದೇಶಿಸಿದ್ದಾರೆ.

ಸಮಿತಿಯ ಅಧ್ಯಕ್ಷ ಸಾಜಿದ್ ಕಲ್ಯಾಣಿ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು. ಮೇಯರ್, ಉಪಮೇಯರ್ ಶಿವಾನಂದ ಪಿಸ್ತಿ, ಸಮಿತಿಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು.  

ಸಭೆಗೆ ಸುಮಾರು 10 ದಿನಗಳ ಹಿಂದೆ ಪಾಲಿಕೆಯ ಸಭಾ ಶಾಖೆಯಿಂದ ಸಂಬಂಧಪಟ್ಟವರಿಗೆ ಸಭಾ ಕಾರ್ಯಸೂಚಿ ನೀಡಿ, ವಿಷಯ ಸಂಬಂಧ ಪೂರಕ ಟಿಪ್ಪಣಿ ಸಲ್ಲಿಸುವಂತೆ ತಿಳಿಸಲಾಗಿತ್ತು. ಆದರೆ, ಸಂಬಂಧಪಟ್ಟ ಶಾಖೆಗಳು ಸ್ಥಾಯಿ ಸಮಿತಿಯ ಯಾವ ಸದಸ್ಯರಿಗೂ ಟಿಪ್ಪಣಿ ನೀಡಿಲ್ಲ. ಕೆಲವು ಶಾಖೆಯ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದರು.

‘ಸಭೆಯನ್ನು ಅನಿರ್ದಿಷ್ಟ ಅವಧಿವರೆಗೆ ಮುಂದೂಡಲಾಗಿದೆ. ಸುಮಾರು 20 ವರ್ಷವಾದರೂ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸುಧಾರಿಸಿಕೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ ಮೇಯರ್, ಗೈರು ಹಾಜರಾದ ಅಧಿಕಾರಿ, ಸಿಬ್ಬಂದಿಗೆ ನೋಟಿಸ್ ನೀಡುವಂತೆ ಆದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT