ಪಪ್ಪಾಯ ಕೃಷಿ ಮಾಡಬೇಕು ಎಂಬ ಉದ್ದೇಶದಿಂದ 6 ಎಕರೆ ಜಮೀನು ಲೀಸ್‌ಗೆ ಪಡೆದು ₹34 ಲಕ್ಷ ಖರ್ಚು ಮಾಡಿದ್ದೆ. ಇನ್ನೊಂದು ತಿಂಗಳು ಕಳೆದಿದ್ದರೆ ₹ 1 ಕೋಟಿ ಮೊತ್ತದ ಫಸಲು ಬರುತ್ತಿತ್ತು. ಈಗ ಎಲ್ಲವೂ ನೀರು ಪಾಲಾಗಿದೆ.
– ಖಾಜಾ ಹುಸೇನಿ, ರೈತ ಬಿರಾಳ (ಕೆ) ಗ್ರಾಮ
ಒಂದು ಎಕರೆ ಹತ್ತು ಗುಂಟೆಯಲ್ಲಿ ಹತ್ತಿ ಬಿತ್ತನೆ ಮಾಡಿದ್ದೆ. ಕಳೆದ ವರ್ಷ ನಾಲ್ಕು ಅಡಿಯವರೆಗೆ ಬೆಳದಿದ್ದವು. ಈಗ ಕಾಲುವೆ ನೀರಿನಿಂದ ಬಸಿದು ಹೊಲದ ತುಂಬೆಲ್ಲ ನಿಂತಿದೆ. ಬೆಳೆ ವಿಮೆ ಕಂತು ಪಾವತಿಸಿದ್ದರೂ ಒಮ್ಮೆಯೂ ಪರಿಹಾರ ಸಿಕ್ಕಿಲ್ಲ
– ಬಾಬುರಾಯ ಆಡಿನ, ರೈತ ಕೋಳಕೂರ
ಮಳೆಯಿಂದಾಗಿ ಜಿಲ್ಲೆಯಾದ್ಯಂತ ಇದುವರೆಗೆ 62 ಹೆಕ್ಟೇರ್‌ನಷ್ಟು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದು ಪ್ರತಿ ಹೆಕ್ಟೇರ್‌ಗೆ ₹ 18 ಸಾವಿರದಿಂದ ₹ 22500ರವರೆಗೆ ಪರಿಹಾರ ನೀಡಲಾಗುವುದು.