ಕಲಬುರಗಿ: ನಗರದ ಕಸ್ತೂರಬಾಯಿ ಬುಳ್ಳಾ ಸಾಂಸ್ಕೃತಿಕ ಸಭಾ ಭವನದಲ್ಲಿ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ಸಂಘಟನೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ. ವೈ.ಎಚ್. ನಾಯಕವಾಡಿ ಅವರಿಗೆ ರಾಜ್ಯ ಮಟ್ಟದ ‘ಸ್ನೇಹ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಂತರ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಬಳಿಕ ಸಾಮಾನ್ಯ ಸಭೆ ಜರುಗಿತು.
ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ಸಂಘಟನೆಯ ಮಾಜಿ ಗೌರವಾಧ್ಯಕ್ಷರಾದ ಪ್ರೊ.ಬಿ.ಜಿ.ನಾಟಿಕಾರ, ಡಾ.ಬಿ.ಪಿ. ಬುಳ್ಳಾ, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯೆ ಡಾ. ನಾಗಾಬಾಯಿ ಬಿ.ಬುಳ್ಳಾ, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಕಾಶಿನಾಥ ಎಸ್.ಪಲ್ಲೇರಿ, ಅಂಬರೀಶ ಎಂ.ಪಾಟೀಲ, ಮಾಣಿಕ ಎಸ್.ಕನಕಟ್ಟಿ, ಸೈಬಣ್ಣಾ ಕೆ.ವಡಗೇರಿ, ರಾಮಲಿಂಗ ಎಸ್.ನಾಟಿಕಾರ, ಯಲ್ಲಾಲಿಂಗ ಕೋಬಾಳ, ಅರವಿಂದ ಹುಣಚಿಕೇರಿ, ಅಶೋಕ ಸೊನ್ನ, ಸಂಗಿತಾ ಬುಳ್ಳಾ, ಕಾಶಿನಾಥ ಬಾನರ್, ಧರ್ಮರಾಜ ಆರ್.ಜವಳಿ, ಚಂದ್ರಕಾಂತ ತಳವಾರ ಹಾಗೂ ರಾಜು ಸೊನ್ನ ಇದ್ದರು.