ಕಲಬುರಗಿ: ಕಲಬುರಗಿ–ಬೆಂಗಳೂರು ನಡುವೆ ರೈಲ್ವೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು, ಹಾಸನ–ಸೋಲಾಪುರ ಎಕ್ಸ್ಪ್ರೆಸ್ ರೈಲಿನ (1312) ಎ.ಸಿ. ಸ್ಲೀಪರ್ ಕೋಚ್ಗಳು ಜನರಲ್ ಬೋಗಿಗಳಂತೆ ಆಗಿವೆ.

ಬೇಸಿಗೆ ಅವಧಿಯಲ್ಲಿ ಕಲಬುರಗಿ, ಬೀದರ್, ರಾಯಚೂರು ಜಿಲ್ಲೆಗಳಿಂದ ಸಾವಿರಾರು ಕೂಲಿ ಕಾರ್ಮಿಕರು ಕೆಲಸಕ್ಕಾಗಿ ಬೆಂಗಳೂರಿಗೆ ಗುಳೆ ಹೋಗುವುದು ಸಾಮಾನ್ಯ. ಹೀಗಾಗಿ, ಕಲಬುರಗಿ ಮಾರ್ಗವಾಗಿ ಸಾಗುವ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ವಿಪರೀತವಾಗಿದೆ.

ಬುಧವಾರ ಬೆಂಗಳೂರಿನಿಂದ ಹೊರಟ ಹಾಸನ–ಸೋಲಾಪುರ ಎಕ್ಸ್ಪ್ರೆಸ್ ರೈಲಿನ ಎ.ಸಿ. ಬೋಗಿಯ ನೆಲಹಾಸಿನ ಮೇಲೆ ನಿಂತು ಹಲವರು ಪ್ರಯಾಣಿಸಿದರು. ಇದರಿಂದಾಗಿ ಆ ಬೋಗಿಯಲ್ಲಿ ಅಧಿಕೃತ ಟಿಕೆಟ್ ಹೊಂದಿದ್ದ ಪ್ರಯಾಣಿಕರು ಕೆಳಗಡೆ ಇಳಿಯಲೂ ಆಗದೆ ಪರದಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಲಬುರಗಿ– ಬೆಂಗಳೂರು ನಡುವೆ ಹೆಚ್ಚುವರಿ ರೈಲು ಓಡಿಸದ ರೈಲ್ವೆ ಇಲಾಖೆ ವಿರುದ್ಧ ಅಸಮಾಧಾನವೂ ವ್ಯಕ್ತವಾಗಿದೆ.

‘ಸೋಲಾಪುರ– ಹಾಸನ ಎಕ್ಸ್ಪ್ರೆಸ್ ರೈಲಿನ 2 ಎ.ಸಿ.ಯ 2ನೇ ಕೋಚ್ನಲ್ಲಿ ಜನರಲ್ ಟಿಕೆಟ್ ಪಡೆದ ಹಲವರು ಪ್ರಯಾಣಿಸಿದರು. ಅಧಿಕೃತ ಟಿಕೆಟ್ ಪಡೆದವರ ಸೀಟ್ಗಳನ್ನು ಬಿಟ್ಟುಕೊಡಲಿಲ್ಲ. ಕಲಬುರಗಿಗೆ ಪ್ರತಿ ಬಾರಿ ಪ್ರಯಾಣಿಸುವಾಗ ಇಂತಹುದು ಸಾಮಾನ್ಯವಾಗಿದೆ’ ಎಂದು ಸತೀಶ್ ಪವಾರ್ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.

‘ಪ್ರಯಾಣಿಕರ ದಟ್ಟಣೆ ಇರುವಾಗ ರೈಲ್ವೆ ಇಲಾಖೆಯ ಕಲಬುರಗಿ–ಬೆಂಗಳೂರು ನಡುವೆ ಹೆಚ್ಚುವರಿ ರೈಲುಗಳನ್ನು ಏಕೆ ಓಡಿಸುತ್ತಿಲ್ಲ? ಜನರು ಕಷ್ಟಪಟ್ಟು ಪ್ರಯಾಣ ಮಾಡುತ್ತಿದ್ದರೆ ನಮ್ಮದೇ ರಾಜ್ಯದವರಾದ ರೈಲ್ವೆ ಸಚಿವ ವಿ.ಸೋಮಣ್ಣ, ಸಂಸದ ರಾಧಾಕೃಷ್ಣ ದೊಡ್ಡಮನಿ ಅವರನ್ನು ಆಯ್ಕೆ ಮಾಡಿ ಕಳುಹಿಸಿರುವುದರಿಂದ ಆದ ಪ್ರಯೋಜನ ಏನು’ ಎಂದು ಮತ್ತೊಬ್ಬ ಪ್ರಯಾಣಿಕ ಸುನಿಲ್ ಕುಲಕರ್ಣಿ ಅವರು ಬರೆದುಕೊಂಡಿದ್ದಾರೆ.

ಬೇಸಿಗೆಯಲ್ಲಿ ಬೆಂಗಳೂರಿನ ಮತ್ತು ಕಲಬುರಗಿ ನಡುವೆ ವಾರದಲ್ಲಿ ಮೂರು ದಿನ ಸಂಚರಿಸಬೇಕಿದ್ದ ವಿಶೇಷ ರೈಲು ಕೇವಲ ಒಂದು ದಿನ (ಭಾನುವಾರ) ಓಡಾಡುತ್ತಿದೆ. ರೈಲ್ವೆ ಇಲಾಖೆಯ ಘೋಷಿಸಿದಂತೆ ವಿಶೇಷ ರೈಲು ಮೂರು ದಿನ ಓಡಿಸಬೇಕು ಎಂಬ ಕೂಗು ಪ್ರಯಾಣಿಕರಿಂದ ಕೇಳಿಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.