ಬುಧವಾರ, ಏಪ್ರಿಲ್ 21, 2021
23 °C

ಕಲಬುರ್ಗಿ: ಹಾಸ್ಟೆಲ್‌ ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಇಲ್ಲಿನ ಖಾಸಗಿ ಕಾಲೇಜಿನ ವಸತಿ ನಿಲಯದ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದಿದ್ದ ವಿದ್ಯಾರ್ಥಿನಿ ಶುಕ್ರವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ.

ಚಿಂಚೋಳಿ ತಾಲ್ಲೂಕಿನ ಗರಕಪಳ್ಳಿ ಗ್ರಾಮದ ಮಲ್ಲಿಕಾ ಹಣಮಂತರಾವ್ ಹುಲಿ (17) ಮೃತಪಟ್ಟ ವಿದ್ಯಾರ್ಥಿನಿ. ಪಿಯು ಪ್ರಥಮ ವರ್ಷದ ವಿದ್ಯಾಭ್ಯಾಸಕ್ಕಾಗಿ ಅವರು ನಗರದ ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದರು. ಅದೇ ಕಾಲೇಜಿನ ಹಾಸ್ಟೆಲ್‌ನಲ್ಲಿ ವಾಸ ಮಾಡುತ್ತಿದ್ದರು. ಗುರುವಾರ ರಾತ್ರಿ ಹಾಸ್ಟೆಲ್‌ ಕಟ್ಟಡದ ಮೂರನೇ ಮಹಡಿಯಿಂದ ಅವರು ಬಿದ್ದು ಗಾಯಗೊಂಡಿದ್ದರು. ಒಂದು ದಿನ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ತಡರಾತ್ರಿ ಕೊನೆಯುಸಿರೆಳೆದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.‌

ಪ್ರತಿಭಟನೆ: ವಿದ್ಯಾರ್ಥಿನಿ ಮೃತಪಟ್ಟ ಸುದ್ದಿ ತಿಳಿದು ಗರಕಪಳ್ಳಿ ಗ್ರಾಮದ ಜನರು ಚಿಂಚೋಳಿ ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಚಿಂಚೋಳಿ– ತಾಂಡೂರು ಅಂತರರಾಜ್ಯ ರಸ್ತೆ ತಡೆ ಮಾಡಿದರು.

‘ಕಲಬುರ್ಗಿಯ ಖಾಸಗಿ ಕಾಲೇಜುಗಳ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಸಾವು ಆಗಾಗ ಸಂಭವಿಸುತ್ತಲೇ ಇವೆ. ಆದರೆ, ಪ್ರಭಾವಿಗಳು ಇವುಗಳನ್ನು ಮುಚ್ಚಿ ಹಾಕುತ್ತಿದ್ದಾರೆ. ವಿದ್ಯಾರ್ಥಿನಿ ಮಲ್ಲಿಕಾ ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕು’ ಎಂದು ಆಗ್ರಹಿಸಿದರು.

ಉಮಾ ಪಾಟೀಲ,  ಹಣಮಂತರಾವ್ ಹುಲಿ, ನೀಲಕಂಠ ಸೀಳಿನ್, ಮಾರುತಿ ಗಂಜಗಿರಿ, ಅಮರ ಲೊಡ್ಡನೋರ, ಕಾಶಿರಾಮ ದೇಗಲಮಡಿ, ಅಖಿಲ ಭಾರತ ವೀರಶೈವ ಮಹಾಸಭೆ ತಾಲ್ಲೂಕು ಘಟಕದ ಅಧ್ಯಕ್ಷ ಚಿತ್ರಶೇಖರ ಪಾಟೀಲ, ತಾಲ್ಲೂಕು ಪಂಚಾಯಿತಿ ಸದಸ್ಯ ಜಗನ್ನಾಥ ಈದಲಾಯಿ, ಗಡಿಲಿಂಗದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೌರಿಶಂಕರ ಉಪ್ಪಿನ, ಸುಭಾಷ ಪಾಟೀಲ‌ ಕಾಳಗಿ, ಅಲ್ಲಮಪ್ರಭು ಹುಲಿ, ಅಮರೇಣ ಗೋಣಿ, ದಯಾನಂದ ರೆಮ್ಮಣಿ, ಜಾಫರ್ ಖುರೇಷಿ, ಫಕ್ರುದ್ದಿನ್‌ ಚಾಂಗಲೇರಾ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು