ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ನಗರ, ತಾಲ್ಲೂಕು ಕೇಂದ್ರಗಳಲ್ಲಿ ಲಾಕ್‌ಡೌನ್

ಇಂದಿನಿಂದ ಲಾಕ್‌ಡೌನ್‌ ಜಾರಿಗೊಳಿಸಿ ಜಿಲ್ಲಾಧಿಕಾರಿ ಶರತ್ ಬಿ. ಆದೇಶ
Last Updated 13 ಜುಲೈ 2020, 18:33 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಲಬುರ್ಗಿ ನಗರ ಹಾಗೂ ತಾಲ್ಲೂಕುಗಳ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇದೇ 14ರಿಂದ 20ರವರೆಗೆ ಲಾಕ್‌ಡೌನ್‌ ಜಾರಿಗೊಳಿಸಿ ಜಿಲ್ಲಾಧಿಕಾರಿ ಶರತ್ ಬಿ. ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿಲ್ಲ.

ಖರೀದಿಗೆ ದೌಡು: ಮಂಗಳವಾರದಿಂದ ಲಾಕ್‌ಡೌನ್ ಇರಲಿದೆ ಎಂಬುದನ್ನು ಅರಿತ ಜನಸಾಮಾನ್ಯರು ಸೋಮವಾರ ಬೆಳಿಗ್ಗೆಯಿಂದಲೇ ಸೂಪರ್‌ ಮಾರ್ಕೆಟ್‌, ವಿವಿಧ ದಿನಸಿ ಮಳಿಗೆಗಳು, ಮಾಲ್‌ಗಳಿಗೆ ದೌಡಾಯಿಸಿ ಅಗತ್ಯ ವಸ್ತುಗಳನ್ನು ಖರೀದಿಸಿದರು. ಇದರಿಂದಾಗಿ ನಗರದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ದೈಹಿಕ ಅಂತರ ಎಂಬುದು ಲೆಕ್ಕಕ್ಕೇ ಇರಲಿಲ್ಲ. ಬಹುತೇಕ ಜನರು ಮಾಸ್ಕ್ ಧರಿಸಿರಲಿಲ್ಲ. ಜೇವರ್ಗಿ ರಸ್ತೆಯ ಸೂಪರ್‌ ಬಜಾರ್‌ನಲ್ಲಿ ಗ್ರಾಹಕರೊಬ್ಬರು ₹ 10 ಸಾವಿರ ಮೊತ್ತದ ದಿನಸಿ ಸಾಮಗ್ರಿಗಳನ್ನು ಖರೀದಿಸಿದರು. ಒಂದೊಮ್ಮೆ ಲಾಕ್‌ಡೌನ್‌ ಘೋಷಣೆಯಾದರೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಬಹುದು ಎಂಬ ಭೀತಿಯಿಂದಲೂ ಜನರು ಖರೀದಿಗೆ ಮುಂದಾದರು.

ಲಾಕ್‌ಡೌನ್‌: ಏನೇನು ಇರಲಿದೆ? ಏನು ಇರಲ್ಲ?

* ಕಂಟೇನ್ಮೆಂಟ್‌ ಝೋನ್‌ಗಳಲ್ಲಿ ಆಸ್ಪತ್ರೆ, ಔಷಧಿ ಹೊರತುಪಡಿಸಿ ಉಳಿದ ಚಟುವಟಿಕೆಗಳು ಇರಲ್ಲ

* ಎಲ್ಲ ತರಹದ ಲಾಡ್ಜ್‌, ಬಾರ್‌ ಅಂಡ್‌ ರೆಸ್ಟೊರೆಂಟ್‌, ಡಾಬಾ ಮುಚ್ಚಬೇಕು

* ನಗರ ಪ್ರದೇಶ ಹೊರತುಪಡಿಸಿ ಬೇರೆ ಕಡೆ ಎಂಎಸ್‌ಐಎಲ್ ಮದ್ಯದಂಗಡಿ, ವೈನ್‌ಶಾಪ್‌ಗೆ ಅವಕಾಶ

* ಪ್ರಾರ್ಥನಾ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧ

* ಪಾನ್‌, ಬೀಡಿ, ಗುಟ್ಕಾ, ಸಿಗರೇಟ್‌ ಮಾರಾಟ ನಿಷೇಧ

* ಆಟೊ ರಿಕ್ಷಾ, ಕಾರ್‌, ದ್ವಿಚಕ್ರ ವಾಹನ ನಿಷೇಧ (ತುರ್ತು ಸ್ಥಿತಿ ಹೊರತುಪಡಿಸಿ)

* ಜಾತ್ರೆ, ಉರುಸ್‌, ಮದುವೆ, ಉಪನಯನ, ಗೃಹಪ್ರವೇಶ ನಿಷೇಧ

* ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ಪೆಟ್ರೋಲ್ ಪಂಪ್ ಆರಂಭ

* ದಿನಸಿ ಅಂಗಡಿ, ತರಕಾರಿ, ಹಣ್ಣು, ಹಾಲು, ಪತ್ರಿಕೆಗಳ ವಿತರಣೆ, ಆಸ್ಪತ್ರೆಗೆ ನಿರ್ಬಂಧವಿಲ್ಲ

* ಮಾಲ್‌ಗಳಲ್ಲಿ ದಿನಸಿ ವಸ್ತುಗಳ ಮಾರಾಟಕ್ಕೆ ಮಾತ್ರ ಅನುಮತಿ

* ಕೃಷಿ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ

* ಸರಕು ಸಾಗಾಣಿಕೆ ವಾಹನಕ್ಕೆ ಅನುಮತಿ ಅಗತ್ಯವಿಲ್ಲ

* ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ

* ಕೇಂದ್ರ, ರಾಜ್ಯ ಸರ್ಕಾರಿ ನೌಕರರ ಸಂಚಾರಕ್ಕೆ ಅನುಮತಿ

* ಕಲಬುರ್ಗಿಯಿಂದ ತಾಲ್ಲೂಕುಗಳಿಗೆ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಮಾತ್ರ ಬಸ್‌ ಸಂಚಾರ

* ಕೈಗಾರಿಕಾ ಘಟಕ, ಕಟ್ಟಡ ನಿರ್ಮಾಣ, ಕಚ್ಚಾ ಬಿಡಿಭಾಗಗಳ ಮಾರಾಟಕ್ಕೆ ಅನುಮತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT