ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ನಿರ್ದೇಶಕ ಸ್ಥಾನಗಳಿಗೆ 27 ಸ್ಪರ್ಧಿಗಳು

ಕಲಬುರ್ಗಿ– ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ಗೆ 29ರಂದು ಚುನಾವಣೆ
Last Updated 22 ನವೆಂಬರ್ 2020, 5:22 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ– ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ (ಡಿಸಿಸಿ ಬ್ಯಾಂಕ್)ನ 13 ನಿರ್ದೇಶಕ ಸ್ಥಾನಗಳಿಗೆ ಒಟ್ಟು 27 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ನ. 21 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ನ. 29ರಂದು ಮತದಾನ ನಡೆಯಲಿದೆ.

ಹೊಸದಾಗಿ ನಡೆಯಲಿರುವ ಚುನಾವಣೆಗೆ 27 ಅಭ್ಯರ್ಥಿಗಳಲ್ಲಿ ಬಹುಪಾಲು ಹಿಂದಿನ ನಿರ್ದೇಶಕರೇ ಇದ್ದಾರೆ. 7 ಮಂದಿ ಮಾತ್ರ ಹೊಸಬರು ಉಮೇದುವಾರಿಕೆ ಸಲ್ಲಿಸಿದ್ದಾರೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ 10 ಸ್ಥಾನಗಳು, ತಾಲ್ಲೂಕು ಕೃಷಿ ಹುಟ್ಟುವಳಿ ಮಾರಾಟ ಸಹಕಾರ ಸಂಘದಿಂದ ತಲಾ 1, ಪಟ್ಟಣ ಸಹಕಾರ ಸಂಘಗಳಿಂದ ಒಂದು ಹಾಗೂ ಇತರೆ ಸಹಕಾರಿ ಸಂಸ್ಥೆಗಳಿಂದ ಒಂದು ಸೇರಿ 13 ನಿರ್ದೇಶಕರನ್ನು ಆಯ್ಕೆ ಮಾಡಬೇಕಿದೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕ್ಷೇತ್ರಕ್ಕೆ ಶರಣಬಸಪ್ಪ ಪಾಟೀಲ ಅಷ್ಟಗಾ ಹಾಗೂ ಕಲ್ಯಾಣರಾವ್‌ ಶಿವಶರಣಪ್ಪ ಮೂಲಗೆ,‌ ಪಟ್ಟಣ ಸಹಕಾರ ಸಂಘಗಳ ಕ್ಷೇತ್ರದಿಂದ ಸೋಮಶೇಖರ ಗೋನಾಯಕ ಹಾಗೂ ಸಾವಿತ್ರಿ ಶಿವಶರಣಪ್ಪ ಕುಳಗೇರಿ, ಇತರೆ ಸಂಸ್ಥೆಗಳಿಂದ ಗುರುಬಸಪ್ಪ ಪಾಟೀಲ, ಬಸವರಾಜ ಮಲ್ಲಪ್ಪ ಪೂಜಾರಿ ಕೂಟನೂರ,ಸುರೇಶ ಸಜ್ಜನ, ಕಲ್ಯಾಣಪ್ಪ ಶಿವಶರಣಪ್ಪ ಜೇವರ್ಗಿ ಅವರು ಕಣಕ್ಕಿಳಿದಿದ್ದಾರೆ.

ಜೇವರ್ಗಿ ಟಿಎಪಿಎಂಎಸ್‌ನಿಂದ ಕೇದಾರಲಿಂಗಯ್ಯ ಹಿರೇಮಠ, ನಿಂಗಣ್ಣ ಮಾಳಪ್ಪ ದೊಡ್ಡಮನಿ ಹಾಗೂ ಬಸವರಾಜ ಪ್ರಭುರಾಯ ಖಾನಗೌಡ್ರ, ಆಳಂದ ತಾಲ್ಲೂಕಿನಿಂದ ಅಶೋಕ ಸಾವಳೇಶ್ವರ, ಕಲ್ಲಪ್ಪ ಸಿದ್ರಾಮಪ್ಪ ಹತ್ತರಕಿ, ಚಿಂಚೋಳಿಯಿಂದ ಗೌತಮ ವೈಜನಾಥ ಪಾಟೀಲ ಹಾಗೂ ಶೈಲೇಶಕುಮಾರ ಪ್ರಭುಲಿಂಗ ಹುಲಿ, ಅಫಜಲಪುರದಿಂದ ಮಹಾಂತಗೌಡ ಸಿದ್ದಣ್ಣಗೌಡ ಪಾಟೀಲ ಹಾಗೂ ಸೋಮನಾಥ ಶರಣಪ್ಪ ನೂಲಾ, ಚಿತ್ತಾಪುರದಿಂದ ಬಸವರಾಜ ಅಣ್ಣಾರಾವ ಪಾಟೀಲ ಹೇರೂರ ಹಾಗೂ ಭೀಮರೆಡ್ಡಿ ಮಲ್ಲಣ್ಣಗೌಡ ಕುರಾಳ ಕಣದಲ್ಲಿದ್ದಾರೆ. ಸೇಡಂನಿಂದ ನಂದಕಿಶೋರ ರೆಡ್ಡಿ ಮಾತ್ರ ನಾಮಪತ್ರ ಸಲ್ಲಿಸಿದ್ದು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಟಿಎಪಿಸಿಎಂ ಕ್ಷೇತ್ರದಿಂದ ಮಹ್ಮದ್‌ ಇಬ್ರಾಹಿಂ ಶಿರವಾಳ, ಶಿವಾನಂದ ಮಾನಕರ, ಶಿವಮಹಾಂತಪ್ಪ ಹಣಮಂತರಾಯ ನಾಮಪತ್ರ ಸಲ್ಲಿಸಿದ್ದಾರೆ. ಯಾದಗಿರಿ ತಾಲ್ಲೂಕಿನಿಂದ ಮಲ್ಲಿಕಾರ್ಜುನ ರೆಡ್ಡಿ ಕೌಳೂರ ಹಾಗೂ ಸುರಪುರ ತಾಲ್ಲೂಕಿನಿಂದ ಬಾಪುಗೌಡ ದುಂಡಪ್ಪಗೌಡ ಒಬ್ಬೊಬ್ಬರೇ ಕಣದಲ್ಲಿದ್ದು, ಅವಿರೋಧ ಆಯ್ಕೆ ಖಚಿತವಾಗಿದೆ. ಶಹಾಪುರದಿಂದ ಸಿದ್ರಾಮರೆಡ್ಡಿ ವಿ. ಪಾಟೀಲ, ಗುರುನಾಥ ರೆಡ್ಡಿ ಪರ್ವತರೆಡ್ಡಿ ಸೆಣಸಾಟಕ್ಕೆ ನಿಂತಿದ್ದಾರೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT