ಸೋಮವಾರ, ಜೂನ್ 21, 2021
30 °C

ಕಾಳಗಿ: ಸಾಹಿತ್ಯ ಸಮ್ಮೇಳನ ರಥದ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಳಗಿ: ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಪಟ್ಟಣಕ್ಕೆ ಭಾನುವಾರ ಪ್ರಚಾರ ರಥ ಆಗಮಿಸಿ, ಮುಖ್ಯರಸ್ತೆಯಲ್ಲಿ ಮೆರವಣಿಗೆ ಸಾಗಿತು.

ಸ್ಥಳೀಯ ಹಿರೇಮಠದ ಪೀಠಾಧಿಪತಿ ಶಿವಬಸವ ಶಿವಾಚಾರ್ಯರು ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಚಾವಡಿಕಟ್ಟೆಯಿಂದ ಬಸ್ ನಿಲ್ದಾಣ ಮಾರ್ಗವಾಗಿ ರಾಮನಗರದ ಅಂಬೇಡ್ಕರ್ ವೃತ್ತಕ್ಕೆ ತೆರಳಿತು.

ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ಪತಂಗೆ, ಮುಖಂಡ ಶಿವಶರಣಪ್ಪ ಕಮಲಾಪುರ, ಎಪಿಎಂಸಿ ನಿರ್ದೇಶಕ ರಾಮಶೆಟ್ಟಿ ಪಾಟೀಲ, ಪಿಎಸ್ಐ ಬಸವರಾಜ ಚಿತ್ತಕೋಟಿ, ಕವಿ ಬಿ.ಎಸ್.ಪ್ಯಾಟಿಮಠ, ರಾಘವೇಂದ್ರ ಗುತ್ತೇದಾರ, ಮಕ್ಕಳ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಪ್ಪ ಪೂಜಾರಿ, ಗ್ರಾಮ ಲೆಕ್ಕಿಗ ಸಂತೋಷ ಮಾನವಿ, ಪರಮೇಶ್ವರ ಮಡಿವಾಳ, ಸತ್ಯನಾರಾಯಣ ವನಮಾಲಿ, ಮಹೇಶ ಮೋರೆ, ನಾಗಣ್ಣ ತೆಂಗಳಿಕರ್, ಶಿವಕುಮಾರ ಶಾಸ್ತ್ರೀ, ಸಂತೋಷ ಕಡಬೂರ, ಸೋಮಶೇಖರ ಮಾಕಪನೋರ, ಶಿವಕುಮಾರ ಕಮಲಾಪುರ, ದತ್ತು ಗುತ್ತೇದಾರ, ಪರಮೇಶ್ವರ ಕಟ್ಟಿಮನಿ, ಬಾಲಚಂದ್ರ ಕಾಂತಿ, ವೀರಣ್ಣ ತೆಂಗಳಿಕರ್, ಸಿದ್ದು ಕದಂ ಸೇರಿದಂತೆ ವಿವಿಧ ಶಾಲಾ ಮಕ್ಕಳು, ಶಿಕ್ಷಕರು, ಸಾಹಿತ್ಯಾಸಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು.

ಬಳಿಕ ರಥವು ಕೋಡ್ಲಿ ಮಾರ್ಗವಾಗಿ ಸುಲೇಪೇಟ್ ಕಡೆಗೆ ಸಂಚರಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು