ಕಾಳಗಿ: ‘ಗ್ರಾಮೀಣ ಪ್ರದೇಶದ ಪ್ರಸಿದ್ಧವಾಗಿರುವ ಧಾರ್ಮಿಕ ಪುಣ್ಯಕ್ಷೇತ್ರಗಳಲ್ಲಿ ಕನ್ನಡಗಿ ಮಲ್ಲಿಕಾರ್ಜುನ ದೇವರ ಗುಡಿಯೂ ಒಂದು. ಇಲ್ಲಿ ಯಾರೂ ಪಕ್ಷ, ಭೇದ, ಭಾವ ಮಾಡದೆ ಒಗ್ಗಟ್ಟಿನಿಂದ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಬೇಕು’ ಎಂದು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಕರೆ ನೀಡಿದರು.

ತಾಲ್ಲೂಕಿನ ಬೆಣ್ಣೆತೊರಾ ಜಲಾಶಯ ದಂಡೆಯ ಕನ್ನಡಗಿ ಮಲ್ಲಿಕಾರ್ಜುನ ದೇವರ ಜಾತ್ರೆ ಅಂಗವಾಗಿ ಶುಕ್ರವಾರ ದೇವಸ್ಥಾನದಲ್ಲಿ ಪೊಲೀಸ್ ಇಲಾಖೆಯಿಂದ ನಡೆದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.

‘ಆ.4ರಂದು ಜಾತ್ರಾ ಮಹೋತ್ಸವ ಜರುಗಲಿದ್ದು, ಶ್ರಾವಣ ಮಾಸದ ಎರಡನೇ ಸೋಮವಾರ ಪಲ್ಲಕ್ಕಿ ಉತ್ಸವದಲ್ಲಿ ಹೇರೂರ (ಕೆ) ಭಕ್ತರ ಭಜನೆ ಮಂಡಳಿ ಆಗಮಿಸಲಿದೆ. ರಾಜ್ಯ, ಹೊರರಾಜ್ಯದ ಅಪಾರ ಭಕ್ತರು ಅನ್ನದಾಸೋಹ ಸೇರಿದಂತೆ ವಿವಿಧ ರೀತಿಯ ಭಕ್ತಿ-ಸೇವೆ ಸಲ್ಲಿಸಲಿದ್ದಾರೆ. ಪ್ರಯುಕ್ತ ಇಲ್ಲಿಯ ಭಕ್ತರು ಗುಂಪು ರಚಿಸುವುದನ್ನು ಬಿಟ್ಟು ಹೊರಗಿನಿಂದ ಬರುವ ಭಕ್ತರಿಗೆ ಸಹಕಾರ ನೀಡಬೇಕು ಎಂದರು.

ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಕಾಳಗಿ ಗ್ರೇಡ್-2 ತಹಶೀಲ್ದಾರ್ ರಾಜೇಶ್ವರಿ, ಪಿಎಸ್ಐ ತಿಮ್ಮಯ್ಯ ಬಿ.ಕೆ, ದೇವಸ್ಥಾನ ಜೀರ್ಣೋದ್ಧಾರ ಸಂಘದ ಅಧ್ಯಕ್ಷ ಮಲ್ಲಿನಾಥ ಪಾಟೀಲ, ಸುಭಾಷಗೌಡ, ಜೆ. ಕೆ ಪಾಟೀಲ ಹರಸೂರ, ಸಂಜುಕುಮಾರ ಪಾಟೀಲ, ಶಿವರಾಜ ಬಿರಾದಾರ, ಕೆ. ಸಿ ಪಾಟೀಲ ಹರಸೂರ, ವಿಜಯಕುಮಾರ ಪಾಟೀಲ, ಶಿವಕುಮಾರ ಮರತೂರ, ಸಿದ್ದಣ್ಣ ತಳವಾರ, ಗುರುಲಿಂಗಪ್ಪ ಪಂಚಾಳ, ಸಿದ್ರಾಮಪ್ಪ ಚಿಂಚನಸೂರ, ಶಿವಕುಮಾರ ಮರತೂರ, ಗುರಣ್ಣ ಕಂಬಾರ, ಚನ್ನವೀರಪ್ಪ ಮಾಲಿಪಾಟೀಲ, ಶಿವಕುಮಾರ ಮೂಲಗೆ, ಅರುಣಕುಮಾರ ಪಾಟೀಲ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.