ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಪಾಕಿಸ್ತಾನದ ಪಕ್ಷ, ಮುಸ್ಲಿಮರ ‌ಪರವಾಗಿದೆ: ಶಾಸಕ ಯತ್ನಾಳ್ ಟೀಕೆ

Last Updated 17 ಡಿಸೆಂಬರ್ 2022, 9:51 IST
ಅಕ್ಷರ ಗಾತ್ರ

ಕಲಬುರಗಿ: ಕಾಂಗ್ರೆಸ್ ಪಕ್ಷವು ಸದಾ ಮುಸ್ಲಿಮರ ‌ಪರವಾದ ನಿಲುವುಗಳನ್ನು ತೆಗೆದುಕೊಳ್ಳುತ್ತಿದೆ. ಹಿಂದುಗಳಿಗೆ ಸಮಸ್ಯೆಯಾದಾಗ ಒಮ್ಮೆಯೂ ಧ್ವನಿ ಎತ್ತಿಲ್ಲ. ಹೀಗಾಗಿ ಅದು ಪಾಕಿಸ್ತಾನದ ಪಕ್ಷವಾಗಿವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಎಂದಿಗೂ ಹಿಂದುಗಳ ಹಿತ ಕಾಯುವ ಕೆಲಸ ಮಾಡಿಲ್ಲ. ಇದೀಗ ಅವರಿಗೆ ಅಭದ್ರತೆ ಶುರುವಾಗಿದ್ದರಿಂದಲೇ ಎಲ್ಲರೂ ಬೀದಿಗೆ ಬಂದಿದ್ದಾರೆ. ರಾಹುಲ್ ಗಾಂಧಿ ಗಡ್ಡ ಬಿಟ್ಟುಕೊಂಡು ಭಾರತ್ ಜೋಡೊ ಯಾತ್ರೆ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿಲ್ಲ. ಅವರನ್ನು ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯರನ್ನಾಗಿ ಮೋದಿ ಅವರು ನೇಮಕ ಮಾಡಿದ್ದಾರೆ. ಈಗಲಾದರೂ ಯಡಿಯೂರಪ್ಪ ಅವರು ದೆಹಲಿ, ಗುಜರಾತ್, ಕಾಶ್ಮೀರದ ಪಕ್ಷದ ವಿದ್ಯಮಾನಗಳ ಬಗ್ಗೆ ಯೋಚಿಸಬೇಕು. ನಾನು ಮೊದಲು ಜಿಲ್ಲಾ ಪಂಚಾಯಿತಿ ಸದಸ್ಯನಿದ್ದೆ. ಈಗ ಶಾಸಕನಾಗಿದ್ದೇನೆ. ನಾನು ಶಾಸಕನ ಜವಾಬ್ದಾರಿ ನಿರ್ವಹಿಸಬೇಕೇ ಹೊರತು ಜಿ.ಪಂ.‌ ಸದಸ್ಯನಂತೆ ಯೋಚಿಸಬಾರದು. ಹಾಗೆಯೇ ಯಡಿಯೂರಪ್ಪ ಅವರು ರಾಷ್ಟ್ರಮಟ್ಟದ ಸಂಗತಿಗಳತ್ತ ಗಮನ ಹರಿಸಬೇಕು ಎಂದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT