ಭಾನುವಾರ, ಮಾರ್ಚ್ 7, 2021
30 °C

ಕಲಬುರ್ಗಿ ಪ್ರದಕ್ಷಿಣೆ ಹಾಕಿದ ಸಚಿವರಾದ ಖಾದರ್‌, ಪ್ರಿಯಾಂಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ ನಗರ  ಪ್ರದಕ್ಷಿಣೆ ಮಾಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.

ನಗರದ ಸ್ವಸ್ತಿಕ್‌ ನಗರದಲ್ಲಿರುವ ಸಾರ್ವಜನಿಕ ಉದ್ಯಾನವನಕ್ಕೆ ಭೇಟಿ ನೀಡಿದಾಗ ಸಚಿವರನ್ನು ಭೇಟಿಯಾದ ಸ್ಥಳೀಯರು ಉದ್ಯಾನವನದಲ್ಲಿ ಗ್ರಂಥಾಲಯ ಸ್ಥಾಪಿಸಿ ಓದುಗರಿಗೆ ಅನುಕೂಲ ಮಾಡಕೊಡಬೇಕೆಂದು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಸಚಿವದ್ವಯರು ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ, ಜಯದೇವ ಆಸ್ಪತ್ರೆಯ ಹತ್ತಿರ ಸ್ಥಾಪಿಸಲಾಗಿರುವ ಇಂದಿರಾ ಕ್ಯಾಂಟಿನ್‌ನ ಆಹಾರ ತಯಾರಿಕಾ ಘಟಕಕ್ಕೆ ಭೇಟಿ ನೀಡಿದರು. ಅಡುಗೆ ಸಾಮಗ್ರಿ ಹಾಗೂ ಧಾನ್ಯಗಳನ್ನು ಪರಿಶೀಲಿಸಿದರು.

ಇದೇ ವೇಳೆ ಅಲ್ಲಿನ ಅಡುಗೆಯವರು ತಯಾರಿಸಿದ್ದ ಅನ್ನ ಹಾಗೂ ಸಾಂಬಾರ್ ರುಚಿ ಸವಿದರು.

ಸಾಂಬಾರ್ ರುಚಿ ನೋಡಿದ ಸಚಿವರು ಸಾಂಬಾರ್ ಚೆನ್ನಾಗಿದೆ ಇದೇ ರುಚಿ ಮುಂದುವರೆಸಿ ಹಾಗೂ ಸ್ವಚ್ಛತೆಗೆ ಆದ್ಯತೆ ಕೊಡಿ ಎಂದರು.

ನಂತರ ಕಪನೂರು ಗ್ರಾಮದ ಒಳಚರಂಡಿ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು