ಕಲಬುರಗಿ: ‘ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂಬ ಆರೋಪದ ಹಿನ್ನೆಲೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಿಸಿರುವ ಪ್ರಕರಣ ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿ ಕೋಲಿ ಸಮುದಾಯದ ಸಾವಿರಾರು ಮಂದಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
.ಬಾಲಕಿ ಜೊತೆ ಅನುಚಿತ ವರ್ತನೆ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೊ ಪ್ರಕರಣ.
ಕರ್ನಾಟಕ ರಾಜ್ಯ ಕೋಲಿ, ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿ ಹಾಗೂ ಮಲ್ಲಿಕಾರ್ಜುನ ಮುತ್ಯಾ ಅಭಿಮಾನಿಗಳ ಬಳಗ ನೇತೃತ್ವದಲ್ಲಿ ನಗರದ ಜಗತ್ ವೃತ್ತದಲ್ಲಿ ಅಸಂಖ್ಯಾತ ಮಂದಿ ಜಮಾಯಿಸಿದರು. ಹೋರಾಟಕ್ಕೆ ತೆಲಂಗಾಣದ ತಾಂಡೂರು, ಹೈದರಾಬಾದ್, ಬೀದರ್ ಜಿಲ್ಲೆಯ ಬಸವಕಲ್ಯಾಣ, ಯಾದಗಿರಿ ಜಿಲ್ಲೆಯ ಶಹಾಪುರ, ಯಾದಗಿರಿ, ಸುರಪುರ, ಕಲಬುರಗಿ ಜಿಲ್ಲೆಯ ವಾಡಿ, ಚಿತ್ತಾಪುರ, ಚಿಂಚೋಳಿ ಸೇರಿದಂತೆ ಹಲವೆಡೆಯಿಂದ ಸಾವಿರಾರು ಜನರು ಹರಿದುಬಂದರು.

ನೆತ್ತಿಸುಡುವ ಬಿಸಿಲಿನಲ್ಲೇ ಅಂಬಿಗರ ಚೌಡಯ್ಯ ಧ್ವಜಗಳು ಹಿಡಿದು, ಹೆಗಲಿಗೆ ಶಾಲುಗಳನ್ನು ಹಾಕಿಕೊಂಡು ಮಲ್ಲಿಕಾರ್ಜುನ ಮುತ್ಯಾ ಪರ ಘೋಷಣೆ ಮೊಳಗಿಸಿದರು. ‘ವಿ ಸ್ಟ್ಯಾಂಡ್ ವಿಥ್ ಮಲ್ಲಿಕಾರ್ಜುನ ಮುತ್ಯಾ’ ಭಿತ್ತಿ ಫಲಕಗಳನ್ನು ಪ್ರದರ್ಶಿಸಿದರು. 45 ನಿಮಿಷಗಳ ಕಾಲ ಜಗತ್ವೃತ್ತದಲ್ಲಿ ವಾಹನಗಳ ಸಂಚಾರ ತಡೆದು, ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಕಾದ ರಸ್ತೆಯಲ್ಲೇ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.

ತಮಟೆ ಬಾರಿಸುತ್ತ, ಮಲ್ಲಿಕಾರ್ಜುನ ಮುತ್ಯಾ ಪರವಾಗಿ ಘೋಷಣೆ ಕೂಗುತ್ತ, ಪ್ರಕರಣ ದಾಖಲಿಸಿದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಮೊಳಗಿಸುತ್ತ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಮತ್ತೆ ಆಕ್ರೋಶ ವ್ಯಕ್ತಪಡಿಸಲಾಯಿತು.

‘ಮಲ್ಲಿಕಾರ್ಜುನ ಮುತ್ಯಾ ಬರೀ ಕಲ್ಯಾಣ ಕರ್ನಾಟಕ ಮಾತ್ರವಲ್ಲದೇ ಆಂಧ್ರ, ತಮಿಳುನಾಡಿನಲ್ಲೂ ಹೆಸರು ಮಾಡಿದ್ದಾರೆ. ಮುತ್ಯಾ ಅವರು ಏಳು ವರ್ಷದ ಬಾಲಕಿಯೊಂದಿಗೆ ತಂದೆಯಂತೆ ವಾತ್ಸಲ್ಯದಿಂದ ಇರುವ ವಿಡಿಯೊ ತಿರುಚಿ ಅಪಪ್ರಚಾರ ಮಾಡಲಾಗಿದೆ. ಅದನ್ನೆ ನೆಪವಾಗಿಟ್ಟುಕೊಂಡು ಮುತ್ಯಾ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಇದನ್ನು ಕೂಡಲೇ ಹಿಂಪಡೆಯಬೇಕು’ ಎಂದು ಪ್ರತಿಭಟನನಿರತ ಮುಖಂಡರು ಆಗ್ರಹಿಸಿದರು.

ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣ, ತೊನಸನಳ್ಳಿಯ ಕೊತಲಪ್ಪ ಮುತ್ಯಾ, ಅವರಳ್ಳಿಯ ರಾಚೋಟೇಶ್ವರ ಕೈಲಾಸ ಮಠದ ಚಿದಾನಂದ ಮಹಾರಾಜ, ವೇದವ್ಯಾಸ ಪೀಠದ ರಾಜಗುರು ಸ್ವಾಮೀಜಿ, ಮುಖಂಡರಾದ ಶಿವಾನಂದ ಹೊನಗುಂಟಿಕರ, ಪಿಂಟು ಜಮಾದಾರ, ರತ್ನಾಕಾಂತ ಶಿವಯೋಗಿಗಳು, ಸಿದ್ಧಶಿವಯೋಗಿ ಗೌರಿಗುಡ್ಡ, ರಾಜಶೇಖರ ಗುರೂಜಿ, ಬೈರತ ಆನಂದ ಉಪ್ಪಾರ ಸಮಾಜ ಸ್ವಾಮೀಜಿ, ಮಲ್ಲಿಕಾರ್ಜುನ ಗುಡಬಾ ಸೇರಿದಂತೆ ಹಲವು ರಾಜಕೀಯ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಸ್ತುಸ್ಥಿತಿ ಅರಿಯದೇ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ ಸಿಡಿಪಿಒ ಸೇರಿದಂತೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು
ರಾಮಲಿಂಗ ನಾಟೀಕರ, ಮುಖಂಡ

‘ಸಂಪುಟದಲ್ಲಿ ಚರ್ಚಿಸಿ, ಪ್ರಕರಣ ರದ್ದುಗೊಳಿಸಿ’

‘ಸರ್ಕಾರ ಕೂಡಲೇ ಸಚಿವ ಸಂಪುಟ ಸಭೆ ಕರೆದು ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ದಾಖಲಾಗಿರುವ ಸುಳ್ಳು ಪೋಕ್ಸೊ ಪ್ರಕರಣ ರದ್ದುಗೊಳಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಆಗ್ರಹಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರಿನ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಮಕ್ಕಳ ಆಯೋಗದ ಅಧ್ಯಕ್ಷರು ವಸ್ತುಸ್ಥಿತಿ ಪರಿಶೀಲಿಸದೇ, ಎಲ್ಲಿಯೋ ಕುಳಿತು ಬರೀ ಸಾಮಾಜಿಕ ಜಾಲತಾಣಗಳನ್ನೇ ನೆಚ್ಚಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದು ಖಂಡನೀಯ. ಶಶಿಧರ ಕೋಸಂಬೆ ಅವರನ್ನು ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರ ಹುದ್ದೆಯಿಂದ ಸರ್ಕಾರ ಕಿತ್ತು ಹಾಕಬೇಕು. ಈ ಸಮಾಜ ಎದ್ದು ಕುಳಿತರೆ, ಜಿಲ್ಲೆ ಮಾತ್ರವಲ್ಲ ರಾಜ್ಯವೂ ಉಳಿಯಲ್ಲ’ ಎಂದು ಎಚ್ಚರಿಸಿದರು.

‘ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಅಧಿಕಾರಿ ಸೇರಿದಂತೆ ಯಾದಗಿರಿ ಜಿಲ್ಲಾಡಳಿತದ ಅಧಿಕಾರಿಗಳು ಕೋಲಿ ಸಮುದಾಯ ಹಾಗೂ ಮಲ್ಲಿಕಾರ್ಜುನ ಮುತ್ಯಾ ಅವರ ಕ್ಷಮೆ ಕೋರಬೇಕು’ ಎಂದು ಒತ್ತಾಯಿಸಿದರು.

‘ಷಡ್ಯಂತ್ರದ ಹಿಂದಿನ ಕೈಗಳ ಪತ್ತೆ ಮಾಡಿ’

‘ಏಳು ವರ್ಷದ ಬಾಲಕಿಯೊಂದಿಗೆ ಮಲ್ಲಿಕಾರ್ಜುನ ಮುತ್ಯಾ ತಂದೆಯಂಥ ವಾತ್ಸಲ್ಯದಿಂದ ಇರುವ ದೃಶ್ಯಗಳನ್ನು ತಿರುಚಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿವೆ. ಇದು ಮುತ್ಯಾ ಅವರ ಏಳಿಗೆ ಸಹಿಸದೇ ತೇಜೋವಧೆ ಮಾಡುವ ಹುನ್ನಾರ. ಈ ಷಡ್ಯಂತ್ರದ ಹಿಂದಿನ ಕೈಗಳನ್ನು ಪತ್ತೆ ಮಾಡಿ, ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ಬಾಲಕಿ ಹಾಗೂ ಅವರ ತಂದೆ–ತಾಯಿಯ ಹೇಳಿಕೆ ದಾಖಲಿಸಿಕೊಂಡು ಮುತ್ಯಾ ವಿರುದ್ಧದ ಪ್ರಕರಣದಲ್ಲಿ ಅಧಿಕಾರಿಗಳು ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಬೇಕು’ ಎಂದು ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿ ಅಧ್ಯಕ್ಷ ಲಚ್ಚಪ್ಪ ಎಸ್.ಜಮಾದಾರ ಆಗ್ರಹಿಸಿದರು.

ಸಂತ್ರಸ್ತೆಯ ಹೇಳಿಕೆ ದಾಖಲು

ಶಹಾಪುರ(ಯಾದಗಿರಿ): ತಾಲ್ಲೂಕಿನ ಮಹಲ್ ರೋಜಾ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾಗಿರುವ ಪೊಕ್ಸೊ ಕಾಯ್ದೆ ಅಡಿಯಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಗೋಗಿ ಠಾಣೆಯ ಪೊಲೀಸರು ಸಂತ್ರಸ್ತೆಯ ಹೇಳಿಕೆ ದಾಖಲಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಜೆಎಂಎಫ್ಸಿ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶೆ ಹೇಮಾ ಪಸ್ತಾಪುರ ಅವರ ಮುಂದೆ ಸಂತ್ರಸ್ತೆಯನ್ನು ಹಾಜರುಪಡಿಸಿ ವಿಚಾರಣೆ ನಡೆಸಿ, ಗೋಪ್ಯವಾಗಿ ಲಕೋಟೆಯನ್ನು ತನಿಖಾಧಿಕಾರಿಗೆ ಹಸ್ತಾಂತರಿಸಲಾಯಿತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಫೆ.28ರಂದು ಗೋಗಿ ಠಾಣೆಯ ತನಿಖಾಧಿಕಾರಿಯು ಮಲ್ಲಿಕಾರ್ಜುನ ಮುತ್ಯಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ 35(3) ಬಿಎನ್ಎಸ್ಎಸ್ ಅಡಿಯಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ, ಮುತ್ಯಾ ಅವರು ಮಠದಲ್ಲಿ ಇರಲಿಲ್ಲ. ಮಠದ ಬಾಗಿಲಿಗೆ ನೋಟಿಸ್ ಅಂಟಿಸಿದೆ’ ಎಂದು ತಿಳಿಸಿದ್ದಾರೆ.
.ಕಲಬುರಗಿ| ರಶೀದ್ ಮುತ್ಯಾ ಮೇಲೆ ಹಲ್ಲೆ: ಭೀಮ್ ಆರ್ಮಿ ಖಂಡನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.