ಸೋಮವಾರ, ಅಕ್ಟೋಬರ್ 26, 2020
28 °C

ಆರೋಗ್ಯ ಅಧಿಕಾರಿಗಳ ಮನವಿಗೆ ಸಚಿವರ ಸ್ಪಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಎಚ್.ಎಂ) ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳ ಪದನಾಮವನ್ನು ಯಾವುದೇ ಸೂಚನೆ ಇಲ್ಲದೇ ಮಧ್ಯಮ ಹಂತದ ಆರೋಗ್ಯ ಸೇವಾದಾತರೆಂದು ಎಲ್ಲ ಕಚೇರಿಗಳಲ್ಲಿ ಉಲ್ಲೇಖಿಸಲಾಗುತ್ತಿದೆ. ಇದನ್ನು ಬದಲಿಸಿ ಮೊದಲಿನಿಂದ ಸಮುದಾಯ ಆರೋಗ್ಯ ಅಧಿಕಾರಿಗಳೆಂದು ಕರೆಯಲು ಕ್ರಮ ಕೈಗೊಳ್ಳಬೇಕು ಎಂದು ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಘದ ಅಧ್ಯಕ್ಷ ಬೀರೇಂದ್ರ ಕೇಶವ ಹಾಗೂ ಯಾದಗಿರಿ ಜಿಲ್ಲಾ ಅಧ್ಯಕ್ಷ ದುಂಡು ಚವ್ಹಾಣ್, ‘ಆಯುಷ್ಮಾನ್ ಭಾರತ ಎಲ್ಲರಿಗೂ ಆರೋಗ್ಯ ಆಶ್ರಯದ ಮೇರೆಗೆ ಹಳ್ಳಿಗಳಿಂದ ಕೂಡಿದ ನಮ್ಮ ದೇಶಕ್ಕೆ ಹಳ್ಳಿಯ ಜನರಿಗೆ ಆರೊಗ್ಯ ಸೌಲಭ್ಯವನ್ನು ಕೊಡಬೇಕೆಂದು ಪ್ರಧಾನ ಮಂತ್ರಿಗಳ ಕನಸಿನ ಕೂಸಾದ ಆಯುಷ್ಮಾನ್ ಭಾರತ ಸಿ.ಪಿ.ಎಚ್.ಸಿ, ಯು.ಎಚ್.ಸಿ ಅಡಿಯಲ್ಲಿ ರಾಜ್ಯದಾದ್ಯಂತ ಬಿ.ಎಸ್ಸಿ ನರ್ಸಿಂಗ್, ಎಂ.ಎಸ್ಸಿ. ನರ್ಸಿಂಗ್ ಪದವೀಧರರನ್ನು ಇಗ್ನೊ ವಿಶ್ವವಿದ್ಯಾಲಯ ಮಾನ್ಯತೆ ಹೊಂದಿರುವ 6 ತಿಂಗಳ ಬ್ರಿಡ್ಜ್ ಕೋರ್ಸ ಮುಗಿಸಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಸಮುದಾಯ ಆರೊಗ್ಯ ಅಧಿಕಾರಿಗಳಾಗಿ ನೇಮಕಗೊಂಡಿರುತ್ತೇವೆ. ಆದರೆ ನಮ್ಮ ಪದನಾಮವನ್ನು ಯಾವುದೇ ಸೂಚನೆಯಿಲ್ಲದೆ ಮಧ್ಯಮ ಹಂತದ ಆರೊಗ್ಯ ಪೂರೈಕೆದಾರರೆಂದು ಎಲ್ಲಾ ಕಚೇರಿ ಪತ್ರಗಳಲ್ಲಿ ಉಲ್ಲೆಖಿಸಲಾಗುತ್ತಿದ್ದು ಇದರಿಂದ ಗೊಂದಲಕ್ಕೊಳಗಾಗಿದ್ದೆವೆ’ ಎಂದರು.

ಮನವಿಯಲ್ಲಿನ ವಿಷಯವನ್ನು ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಿದ ಸಚಿವರು ಮುಂದಿನ ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ಕಳಿಸಿಕೊಟ್ಟು ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಬೀರೇಂದ್ರ ಕೇಶವ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.