ಕಲಬುರಗಿ: ಇಲ್ಲಿನ ಗುಲಶನ್ ಅರಾಫತ್ ಕಾಲೊನಿಯ ನಿವಾಸಿ, ಎಎಸ್‌ಐ ಅಪ್ಸರ್ ಮಿಯಾ ಪಟೇಲ್ ಅವರ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಆರೋಪದಡಿ ಅಪ್ಸರ್ ಪತ್ನಿ ಕನೀಜ್ ಫಾತಿಮಾ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನೀಜ್ ಫಾತಿಮಾ ಅವರು ಮನೆಯಲ್ಲಿ ಸಣ್ಣ ಪುಟ್ಟ ವಿಷಯಕ್ಕೆ ಜಗಳ ಮಾಡುತ್ತಿದ್ದರು. ಮನೆಯ ಸೋಫಾದಲ್ಲಿ ಕುಳಿತಿದ್ದಾಗ ಕಟ್ಟಿಗೆಯಿಂದ ಹೊಡೆದು, ಅವಾಚ್ಯ ಪದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಅಪ್ಸರ್ ಅವರು ದೂರು ಕೊಟ್ಟಿದ್ದಾರೆ.
ಶ್ರೀಗಂಧದ ಮರ ಕಳವು: ಜಗತ್ ವೃತ್ತದಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿನ ಶ್ರೀಗಂಧದ ಮರವನ್ನು ಕಡಿದು ಕಳ್ಳರು ಕದ್ದೊಯ್ದಿದ್ದಾರೆ.
ಸಂದೀಪ ಭರಣಿ ನೀಡಿದ ದೂರಿನ ಅನ್ವಯ ಅಪರಿಚಿತರ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ 22ರ ರಾತ್ರಿ ವೇಳೆ ಸುಮಾರು ₹5 ಸಾವಿರ ಮೌಲ್ಯದ ಶ್ರೀಗಂಧದ ಮರವನ್ನು ಕಡಿದು ಕಳವು ಮಾಡಲಾಗಿದೆ.