ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಲಿಗೆ 3 ಮೇಕೆ ಸಾವು: ಕುರಿಗಾಹಿಗೆ ಗಾಯ

Published 3 ಜೂನ್ 2024, 3:20 IST
Last Updated 3 ಜೂನ್ 2024, 3:20 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ಭಾನುವಾರ ಸಂಜೆ ಗುಡುಗು ಸಹಿತ ಮಳೆಯಾಗಿದೆ.

ತಾಲ್ಲೂಕಿನ ಮರಪಳ್ಳಿ ಗಾರಂಪಳ್ಳಿ ಸೀಮೆಯಲ್ಲಿ ಸಿಡಿಲು ಬಡಿದು ಮೂರು ಮೇಕೆಗಳು ಸಾವನ್ನಪ್ಪಿವೆ. ಜತೆಗೆ ಕುರಿಗಾಹಿ ಪುಟ್ಟಪ್ಪ ಶಿವಪ್ಪ ಎಂಬುವವರು ಸಿಡಿಲಾಘಾತದಿಂದ ಗಾಯಗೊಂಡಿದ್ದಾರೆ.

ತಾಲ್ಲೂಕಿನ ಚಿಮ್ಮಾಈದಲಾಯಿ, ದಸ್ತಾಪುರ, ಗೌಡನಹಳ್ಳಿ, ಗಾರಂಪಳ್ಳಿ, ನೀಮಾ ಹೊಸಳ್ಳಿ, ಅಣವಾರ, ಮೊದಲಾದ ಕಡೆ ಬಿರುಸು ಮಳೆಯಾದರೆ, ಚಿಂಚೋಳಿ, ಪೋಲಕಪಳ್ಳಿ, ಪೋತಂಗಲ್, ರುಸ್ತಂಪುರ, ಕನಕಪುರ ಮೊದಲಾದ ಕಡೆ ಚದುರಿದ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT