ಮಂಗಳವಾರ, ಸೆಪ್ಟೆಂಬರ್ 21, 2021
21 °C
‘ಕೊಟ್ಟ ಮಾತು ನೆನಪಿಸೋಣ- ಮೀಸಲಾತಿ ಪಡೆಯೋಣ’ ಅಭಿಯಾನ

ಲಿಂಗಾಯತರಿಗೆ 2ಎ ಮೀಸಲಾತಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ಲಿಂಗಾಯತ ಪಂಚಮಸಾಲಿ ಹಾಗೂ ಉಪನಾಮಗಳಾದ ದೀಕ್ಷ ಲಿಂಗಾಯತ, ಗೌಡ ಲಿಂಗಾಯತ, ಮಲೆಗೌಡ ಲಿಂಗಾಯತ ಸೇರಿದಂತೆ ಇನ್ನಿತರ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಕೊಡಬೇಕೆಂದು ಒತ್ತಾಯಿಸಿ ಬುಧವಾರ ಅಖಿಲ ಭಾರತ ಲಿಂಗಾಯತ ಮೀಸಲಾತಿ ಹಕ್ಕೊತ್ತಾಯ ವೇದಿಕೆ ಮುಖಂಡರು ಇಲ್ಲಿನ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದರು.

ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಲಿಂಗಾಯತರು ಹಾಗೂ ಉಪನಾಮಗಳ ಲಿಂಗಾಯತರಿಗೆ 2ಎ ಮೀಸಲಾತಿ ನೀಡಬೇಕೆಂದು ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ 23 ದಿನಗಳ ಕಾಲ ಧರಣಿ ನಡೆಸಿದಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 6 ತಿಂಗಳು ಸಮಯಾವಕಾಶ ಕೋರಿದ್ದರು. ಅದರಂತೆ ಸರ್ಕಾರ ಕೇಳಿದ 6 ತಿಂಗಳ ಸಮಯಾವಕಾಶ ಇಂದಿಗೆ ಸೆ.15ಕ್ಕೆ ಮುಗಿದಿದ್ದು, ‘ಕೊಟ್ಟ ಮಾತು ನೆನಪಿಸೋಣ ಹಾಗೂ ಮೀಸಲಾತಿ ಪಡೆಯೋಣ ಅಭಿಯಾನ’ ರಾಜ್ಯದಾದ್ಯಂತ ನಡೆಸಲಾಗುತ್ತಿದ ಎಂದು ವೇದಿಕೆ ಸಂಚಾಲಕ ಶರಣುಪಾಟೀಲ ಮೋತಕಪಳ್ಳಿ ತಿಳಿಸಿದರು.

ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಚಿತ್ರಶೇಖರ ಪಾಟೀಲ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಲಾಮೂರ ಮಾತನಾಡಿ, ಲಿಂಗಾಯತರಿಗೆ ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ಮತ್ತು ವೃತ್ತಿ ಶಿಕ್ಷಣ ಹಾಗೂ ನವೋದಯ ಶಾಲೆ ಪ್ರವೇಶದಲ್ಲಿ ಅನ್ಯಾಯವಾಗುತ್ತಿದೆ. ಪ್ರಯುಕ್ತ ಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಈಚೆಗೆ ನೀಡಿದ್ದರಿಂದ ಮುಖ್ಯಮಂತ್ರಿಗಳು ಲಿಂಗಾಯತ ಹಾಗೂ ಉಪನಾಮಗಳಿಗೆ 2ಎ ಮೀಸಲಾತಿ ಘೋಷಿಸಬೇಕೆಂದು ಒತ್ತಾಯಿಸಿದರು.

ಮುಖಂಡರಾದ ನಾಗಶೆಟ್ಟಿ ಕಾಳಗಿ, ಸೂರ್ಯಕಾಂತ ಹುಲಿ, ವಿಶ್ವನಾಥ ದೇಶಮುಖ್, ನೀಲಕಂಠ ಸೀಳಿನ್, ಆನಂದ ಹಿತ್ತಲ್, ಸುರೇಶ ದೇಶಪಾಂಡೆ, ಉದಯಕುಮಾರ ಪಾಟೀಲ, ಚನ್ನಶೆಟ್ಟಿ ಪಾಟೀಲ, ರಾಜು ಮುಸ್ತಾರಿ, ರಾಜಶೇಖರ ಹಿತ್ತಲ್, ಸುಭಾನರೆಡ್ಡಿ ಶೇರಿಕಾರ, ಸೂರ್ಯಕಾಂತ ಚಿಂಚೋಳಿಕರ್, ನಾಗರಾಜ ಮಲಕೂಡ, ಸುರೇಶ ಬೆಟಗೇರಿ, ರಾಜು ಪಟಪಳ್ಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು