ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಚರ್ಚೆ, ತಂತ್ರಜ್ಞಾನ ಬಳಕೆ ಅವಶ್ಯ: ಪ್ರೊ. ಚಂದ್ರಕಾಂತ ಯಾತನೂರ

ಗುಲಬರ್ಗಾ ವಿಶ್ವವಿದ್ಯಾಲಯದ ಹಿಂದಿ ವಿಭಾಗದಿಂದ ವೆಬಿನಾರ್
Last Updated 10 ಜೂನ್ 2020, 16:48 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕೊರೊನಾ ಸೋಂಕು ವ್ಯಾಪಿಸಿರುವ ಇಂದಿನ ದಿನಗಳಲ್ಲಿ ವೆಬಿನಾರ್ (ಆನ್‌ಲೈನ್ ವಿಚಾರ ಸಂಕಿರಣ) ಮೂಲಕ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಾಹಿತಿಗಳು ಸಂವಾದ ನಡೆಸಿರುವುದು ಶ್ಲಾಘನೀಯ ಕಾರ್ಯ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಚಂದ್ರಕಾಂತ ಯಾತನೂರ ತಿಳಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಹಿಂದಿ ವಿಭಾಗದಿಂದ ಬುಧವಾರ ‘ಹಿಂದಿ ಕವಿತಾ: ನಯಾ ಪಾಠ ಏವಂ ಆಲೋಚನಾ’ ಕುರಿತು ಏರ್ಪಡಿಸಲಾಗಿದ್ದ ವೆಬಿನಾರ್ ಉದ್ಘಾಟಿಸಿ ಮಾತನಾಡಿದ ಅವರು, ‘ವೆಬಿನಾರ್ ಮೂಲಕ ಜನರನ್ನು ಸಂವಾದಿಸಬಹುದು, ಸುರಕ್ಷತೆ ಅನುಸರಿಸಬಹುದು ಮತ್ತು ತಂತ್ರಜ್ಞಾನ ಸದ್ಬಳಕೆ ಮಾಡಬಹುದು’ ಎಂದರು.

‘ಹಿಂದಿ ಭಾಷೆಯು ತನ್ನದೇ ಆದ ಇತಿಹಾಸ ಮತ್ತು ಮಹತ್ವ ಹೊಂದಿದ್ದು, ಇದರ ಬಗ್ಗೆ ಹೆಚ್ಚು ಅಧ್ಯಯನ ನಡೆಯಬೇಕು. ಸಾಹಿತ್ಯ ಮತ್ತು ಸಮಕಾಲೀನತೆ ಬಗ್ಗೆ ಚರ್ಚೆ ನಡೆಯುತ್ತಿರುವುದು ಉತ್ತಮ ಬೆಳವಣಿಗೆ‌. ಇದು ಹೊಸ ಆಲೋಚನೆಗಳಿಗೆ ದಾರಿ ಮಾಡಿಕೊಡುತ್ತದೆ’ ಎಂದು ಅವರು ತಿಳಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಮುಖ್ಯಸ್ಥೆ ಪರಿಮಳಾ ಅಂಬೇಕರ್, ಉರ್ದು ವಿಭಾಗದ ಮುಖ್ಯಸ್ಥ ಅಬ್ದುಲ್ ರಬ್ ಉಸ್ತಾದ್, ಮುಂಬೈ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ. ದತ್ತಾತ್ರೇಯ ಮುರುಂಕರ್, ಶಿವಾಜಿ ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ. ಸತೀಶ ಯಾದವ, ಮೈಸೂರು ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಅಧ್ಯಕ್ಷೆ ಪ್ರತಿಭಾ ಮೊದಲಿಯಾರ್ ವಿಚಾರ ಮಂಡಿಸಿದರು. 240 ಮಂದಿ ಪಾಲ್ಗೊಂಡಿದ್ದರು.

ಕುಲಸಚಿವ ಪ್ರೊ. ಸೋಮಶೇಖರ್, ಹಣಕಾಸು ವಿಭಾಗದ ಅಧಿಕಾರಿ ಪ್ರೊ. ಬೂತ್ಪುರ್ ವಿಜಯ್, ಕಾಲ ನಿಕಾಯದ ಡೀನ್ ಪ್ರೊ. ಎಚ್.ಟಿ.ಪೋತೆ ಮತ್ತು ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಡಾರ್ಲೆ. ಎಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT