ಮಂಗಳವಾರ, ಅಕ್ಟೋಬರ್ 27, 2020
25 °C

ಕಲಬುರ್ಗಿ: ಸಾಲ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ 2020-21ನೇ ಸಾಲಿಗೆ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸ್ವಯಂ ಉದ್ಯೋಗ ಸಾಲ ಯೋಜನೆ, ಸ್ವ-ಸಹಾಯ ಗುಂಪುಗಳ ಮೂಲಕ ಸಾಲ ಮತ್ತು ಸಹಾಯಧನ ಯೋಜನೆ, ಅರಿವು-ಶೈಕ್ಷಣಿಕ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಭೂ ಖರೀದಿ ಯೋಜನೆ ಹಾಗೂ ಬ್ಯಾಂಕ್‍ಗಳ ಸಹಯೋಗದೊಂದಿಗೆ ಸಾಲ ಮತ್ತು ಸಹಾಯಧನದಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ನಿಗಮದ ಜಿಲ್ಲಾ ಕಚೇರಿಯಿಂದ ಅಥವಾ ನಿಗಮದ ವೆಬ್‍ಸೈಟ್‍ದಿಂದ ಪಡೆದು ಭರ್ತಿ ಮಾಡಿ www.dbcdc.karnataka.gov.in ವೆಬ್‍ಸೈಟ್‍ ಮೂಲಕ ಅರ್ಜಿ ಸಲ್ಲಿಸಬೇಕು.

ಅ. 29 ಕೊನೆಯ ದಿನ. ಅಭ್ಯರ್ಥಿಗಳು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ನಿಗಮದ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ಸಂದರ್ಶನ ಮೂಲಕ ತಂತ್ರಜ್ಞರು, ಕಲಾವಿದರ ಆಯ್ಕೆ

ಕಲಬುರ್ಗಿ: ಕಲಬುರ್ಗಿ ರಂಗಾಯಣದ ರೆಪರ್ಟ್‍ರಿಗೆ ಮೂರು ವರ್ಷಗಳ ಅವಧಿಗೆ ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಮೂವರು ತಂತ್ರಜ್ಞರು ಹಾಗೂ 12 ಕಲಾವಿದರ ಆಯ್ಕೆಗೆ ಸಂಬಂಧಿಸಿದಂತೆ ಸೆ. 7 ಹಾಗೂ 8 ರಂದು ಜರುಗಿದ ಸಂದರ್ಶನದಲ್ಲಿ ಕೆಳಕಂಡ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಕಲಬುರ್ಗಿ ರಂಗಾಯಣ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ಬೀದರಿನ (ಧ್ವನಿ-ಬೆಳಕು ವಿಭಾಗ) ಉಮೇಶ್ ಪಾಟೀಲ, ಕಲಬುರ್ಗಿಯ (ಸಂಗೀತ ವಿಭಾಗ) ಪ್ರಕಾಶ್ ಪೂಜಾರಿ ಹಾಗೂ ಕಲಬುರ್ಗಿಯ ರಾಜಕುಮಾರ್ (ರಂಗಸಜ್ಜಿಕೆ ವಿಭಾಗ).

ಆಯ್ಕೆಯಾದ ಕಲಾವಿದರ ವಿವರ ಇಂತಿದೆ: ಕಲಬುರ್ಗಿಯ ಭಾಗ್ಯಶ್ರೀ, ಸಿದ್ಧಪ್ಪ, ಅಭಿಷೇಕ, ಅಕ್ಷತಾ ಕುಲಕರ್ಣಿ, ಲಲಿತಾ ಖ್ಯಾಮನವರ, ಜಗದೀಶ, ಕೊಪ್ಪಳದ ಅಕ್ಕಮ್ಮ, ರಾಯಚೂರಿನ ಮರಿಯಮ್ಮ ಮತ್ತು ಮಹಾಂತೇಶ, ಯಾದಗಿರಿಯ ಶ್ರೀನಿವಾಸ, ಬಳ್ಳಾರಿಯ ರಾಜು ಉಪ್ಪಾರ ಹಾಗೂ ಉಡುಪಿಯ ನಾಗೇಶ.

ಕಾಯ್ದಿರಿಸಿದ ಪಟ್ಟಿಯ ವಿವರ ಇಂತಿದೆ: ಶಿವಮೊಗ್ಗದ ಇಂದು, ಕಲಬುರ್ಗಿಯ ವಾಣಿಶ್ರೀ ಮತ್ತು ಜ್ಯೋತಿ ರಾಠೋಡ, ಅಂಬರೀಶ ಹಾಗೂ ರಾಯಚೂರಿನ ಸಾಗರ.

ಅರ್ಜಿ ಆಹ್ವಾನ

ಕಲಬುರ್ಗಿ: ಪೋಷಣ್ ಅಭಿಯಾನ ಯೋಜನೆಯಡಿ ಅಫಜಲಪುರ ತಾಲ್ಲೂಕಿನ ಖಾಲಿ ಇರುವ ಸಂಯೋಜಕರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಯು ಬ್ಯಾಚಲರ್ ಆಫ್ ಕಂಪ್ಯೂಟರ್ ಸೈನ್ಸ್, ಬಿಸಿಎ, ಬಿ.ಟೆಕ್., ಬಿ.ಇ. ಇನ್ ಐಟಿ, ಸಾಫ್ಟ್‌ವೇರ್ ಅಪ್ಲಿಕೇಶನ್/ ಐಸಿಟಿ ವಿಭಾಗಗಳಲ್ಲಿ ಪದವೀಧರರಾಗಿರಬೇಕು. ಟೆಕ್ನಾಲಾಜಿ ಅಂಡ್ ಸಾಫ್ಟ್‌ವೇರ್ ಅಪ್ಲಿಕೇಶನ್ ಸಪೋರ್ಟ್‍ನಲ್ಲಿ ಕರ್ತವ್ಯ ನಿರ್ವಹಿಸಿರುವ ಮತ್ತು ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು.

ಅರ್ಜಿಯನ್ನು ಅಕ್ಟೋಬರ್ 15 ರೊಳಗಾಗಿ ಕಲಬುರ್ಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08472-278659ಗೆ ಸಂಪರ್ಕಿಸಲು ಕೋರಲಾಗಿದೆ.

ಬೆಳೆ ಸಮೀಕ್ಷೆ: ಅ.15ರವರೆಗೆ ಅವಕಾಶ

ಕಲಬುರ್ಗಿ: ಜಿಲ್ಲೆಯಲ್ಲಿ 2020ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ಸಂಬಂಧಿಸಿದಂತೆ ರೈತರು ತಮ್ಮ ಬೆಳೆಗಳ ಫೋಟೊ ಅಪ್‍ಲೋಡ್ ಮಾಡಿರುವುದರಲ್ಲಿ ಯಾವುದೇ ಲೋಪದೋಷ ಕಂಡುಬಂದಲ್ಲಿ ಬೆಳೆ ’ದರ್ಶಕ್ 2020‘ ಆ್ಯಪ್‍ನಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳನ್ನು ಸರಿಯಾಗಿ ನಮೂದಿಸಲಾಗಿದೆಯೇ ಎಂಬುದನ್ನು ರೈತರು ಮೊಬೈಲ್‍ನಲ್ಲಿನ ಪ್ಲೇಸ್ಟೋರ್‌ನಲ್ಲಿ ಬೆಳೆ ದರ್ಶಕ 2020 ಎಂಬ ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಂಡು ಬೆಳೆಗಳ ಫೋಟೊ ಅಪ್‍ಲೋಡ್ ಮಾಡಿರುವುದರಲ್ಲಿ ಯಾವುದೇ ಆಕ್ಷೇಪಣೆಗಳಿದ್ದಲ್ಲಿ 2020ರ ಅಕ್ಟೋಬರ್ 15ರೊಳಗಾಗಿ ಸಲ್ಲಿಸಬೇಕು.

ಜಿಪಿಎಸ್ ಆಧಾರಿತ ಮೊಬೈಲ್ ಆ್ಯಪ್ ಬಳಸಿ ಬೆಳೆ ಸಮೀಕ್ಷೆ ನಡೆಸುತ್ತಿದ್ದು, ಬೆಳೆ ಸಮೀಕ್ಷೆ ಮೂಲಕ ಸಂಗ್ರಹಿಸಿದ ಬೆಳೆ ಮಾಹಿತಿ, ಮೇಲ್ವಿಚಾರಕರ ಮೂಲಕ ಅನುಮೋದನೆ ನಂತರ, ಈ ಮಾಹಿತಿಯನ್ನು ಬೆಂಬಲ ಬೆಳೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿಗೆ, ಬೆಳೆ ವಿಮೆ ಯೋಜನೆಗೆ ಹಾಗೂ ಬೆಳೆ ನಷ್ಟ ಪರಿಹಾರ ನೀಡುವ ಸಮಯದಲ್ಲಿ ಉಪಯೋಗಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಬಡ್ತಿ: ಪ್ರಸ್ತಾವ ಆಹ್ವಾನ

ಕಲಬುರ್ಗಿ: ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತರಬೇತಿ ಹೊಂದಿದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲಾ ಹಿಂದಿ ಭಾಷಾ ಸಹ ಶಿಕ್ಷಕರ ಗ್ರೇಡ್-2 ಹುದ್ದೆಗೆ ಬಡ್ತಿ ನೀಡಲು ಪ್ರಸ್ತಾವ ಸಲ್ಲಿಸುವಂತೆ ಸಂಬಂಧಪಟ್ಟ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.

ಸಂಬಂಧಪಟ್ಟ ಶಿಕ್ಷಕರು ಕೂಡಲೇ ತಮ್ಮ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ಸದರಿ ಕಚೇರಿಯಲ್ಲಿ ಸಲ್ಲಿಸಬೇಕು. ಈ ಪ್ರಸ್ತಾವಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಅ. 1 ರೊಳಗಾಗಿ ಸಲ್ಲಿಸಬೇಕು. ಸಂಬಂಧಪಟ್ಟ ಶಿಕ್ಷಕರು ಇದನ್ನು ಗಮನಿಸಬೇಕೆಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.