ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಣಗೇರಿ: ಗುರುಚನ್ನವೃಷಭೇಂದ್ರ ಶಿವಯೋಗಿಗಳ ಜಾತ್ರೆ

Last Updated 10 ಡಿಸೆಂಬರ್ 2019, 15:41 IST
ಅಕ್ಷರ ಗಾತ್ರ

ಕಲಬುರ್ಗಿ: ಯಡ್ರಾಮಿ ತಾಲ್ಲೂಕಿನ ಮಾಗಣಗೇರಿ ಗ್ರಾಮದ ಗುರುಚನ್ನವೃಷಭೇಂದ್ರ ಶಿವಯೋಗಿಗಳ ಹಾಗೂ ಕೆಂಭಾವಿ ಹಿರೇಮಠದ ಗುರು ಅಯ್ಯಪ್ಪಯ್ಯ ಶಿವಾಚಾರ್ಯರ ರಥೋತ್ಸವ ಇದೇ 20ರಂದು ನಡೆಯಲಿದೆ. ಅದೇ ದಿನ ರಂಭಾಪುರಿ ಪೀಠದ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ನೆರವೇರಲಿದೆ.

ಮಂಗಳವಾರ ‘ಪ್ರಜಾವಾಣಿ’ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಕುರಿತು ಮಾಹಿತಿ ನೀಡಿದ ಮಾಗಣಗೇರಿ ಶ್ರೀಮಠದ ಡಾ.ವಿಶ್ವರಾಧ್ಯ ಶಿವಾಚಾರ್ಯ ಸ್ವಾಮಿಗಳು, ಜಾತ್ರಾ ಮಹೋತ್ಸವದ ಅಂಗವಾಗಿಡಿಸೆಂಬರ್‌ 6ರಿಂದಲೇ ನವಲಗುಂದ ನಾಗಲಿಂಗ ಶಿವಯೋಗಿಗಳ ಪುರಾಣ ಆರಂಭವಾಗಿದೆ. ಗದಗ ವೀರೇಶ್ವರ ಪುಣ್ಯಾಶ್ರಮದ ಸಾವಿತ್ರೆಮ್ಮ ಹಾಗೂ ಜೇರಟಗಿಯ ಮಡಿವಾಳಯ್ಯ ಶಾಸ್ತ್ರಿಗಳು ನಡೆಸಿಕೊಡುವರು. ಸಿದ್ಧಾರೂಢ ನಾಗರಹಳ್ಳಿ ಸಂಗೀತ ನೀಡಲಿದ್ದು, ರುದ್ರುಸ್ವಾಮಿ ಮೇಲಿನಮಠ ಅವರು ತಬಲಾಸೇವೆ ನೀಡುವರು. ಇದೇ 12ರಂದು ಬಾಗನಗೌಡ ಪಾಟೀಲ ಕವಡಿಮಟ್ಟಿ ಅವರಿಂದ ಸಿಂಹಾಸನ ಪೂಜೆ ನೆರವೇರುವುದು. 19ರಂದು ತೋಟೇಂದ್ರ ಶಿವಾಚಾರ್ಯರ ಗದ್ದುಗೆಗೆ ಸಂಜೆ ದೀಪೋತ್ಸವ ನಡೆಯಲಿದೆ. ಅದೇ ದಿನ ಉಚಿತ ನೇತ್ರ ತಪಾಸಣೆ, ಎಲುಬು, ಕೀಲು, ನರಗಳ ತಜ್ಞರಿಂದ ಆರೋಗ್ಯ ಶಿಬಿರ ನಡೆಯಲಿದೆ’ ಎಂದರು.

ಇದೇ 20ರಂದು ಬೆಳಿಗ್ಗೆ 11ಕ್ಕೆ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಯಲಿದ್ದು, ಸಂಜೆ 5ಕ್ಕೆ ರಥೋತ್ಸವ ಜರುಗುವುದು. ನಂತರ ಪ್ರೌಢಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.ಡಿ 21ರಿಂದ 6 ದಿನಗಳವರೆಗೆ ದನಗಳ ಜಾತ್ರೆ ನಡೆಯಲಿದ್ದು, ಸೊನ್ನ ಐನಾಪುರ, ಮಾಗಣಗೇರಾ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಬೇಕು ಎಂದು ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT