ಕಲಬುರಗಿ: ‘ಜಿಎಸ್ಟಿ ಇಳಿಕೆಯಿಂದ ಬಡವರಿಗೆ ಅನುಕೂಲವಾಗಲಿದೆ. ಇದನ್ನು ಟೀಕಿಸಲ್ಲ. ಆದರೆ, ಜಿಎಸ್ಟಿ ಇಳಿಸುವಂತೆ ನಾವು ಎಂಟು ವರ್ಷಗಳ ಹಿಂದೆಯೇ ಹೇಳಿದ್ದೆವು. ಆಗ ಅವರು ಪರಿಷ್ಕರಿಸಲಿಲ್ಲ.’ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಗರದಲ್ಲಿ ಭಾನುವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಈಗ ದಿಢೀರ್ ಆಗಿ ಯಾವ ಕಾರಣಕ್ಕೆ ಪರಿಷ್ಕರಿಸುತ್ತಿದ್ದಾರೋ ಮೋದಿ ಅವರಿಗೆ ಗೊತ್ತು. ನಾವು ಎಂದಿಗೂ ಜನಪರವಾದ ಸಮಸ್ಯೆಗಳನ್ನು ಎತ್ತಿಹಿಡಿದು ಸರ್ಕಾರಕ್ಕೆ ಹೇಳುತ್ತೇವೆ. ಆದರೆ, ಅವರು ಯಾವಾಗಲೂ ನಿರ್ಲಕ್ಷ್ಯಿಸುತ್ತಾರೆ’ ಎಂದರು.

‘ನರೇಂದ್ರ ಮೋದಿ ಅವರಿಗೆ ತಾನು ಏನು ಮಾಡಿದರೂ ನಡೆಯುತ್ತದೆ ಎಂಬ ಅಹಂಕಾರವಿದೆ. ಅವರ ಅಹಂಕಾರವೇ ಅವರಿಗೆ ಮುಳುವಾಗಿದೆ. ಸುಂಕಾಸ್ತ್ರ ಎದುರಿಸುವಂತಾಗಿದೆ. ವಿದೇಶಾಂಗ ನೀತಿಯಲ್ಲಿ ಭಾರತ ದಶಕಗಳಿಂದ ಅನುಸರಿಸಿದ್ದ ಅಲಿಪ್ತ ನೀತಿ ನಿರ್ಲಕ್ಷ್ಯಿಸಿದರು. ಮೋದಿ ವಿದೇಶದಲ್ಲಿ ಹೋಗಿ ಯಾವುದೇ ರಾಜಕೀಯ ನಾಯಕರ ಪರ ಪ್ರಚಾರ ಮಾಡಬಾರದು ಎಂದು ಹೇಳಿದರೂ ಕೇಳದೇ ಟ್ರಂಪ್ ಪರ ಪ್ರಚಾರ ಮಾಡಿದರು. ತನ್ನ ಆತ್ಮೀಯ ಸ್ನೇಹಿತ ಎಂದು ಹೇಳಿಕೊಂಡರು. ಈ ನಡೆ ಭವಿಷ್ಯದಲ್ಲಿ ಬೇರೆ ರಾಷ್ಟ್ರಗಳ ನಾಯಕರು ಭಾರತಕ್ಕೆ ಬಂದು ಪ್ರಚಾರ ಮಾಡಲು ಮೇಲ್ಪಂಕ್ತಿಯಿಂದ ಹಾಕಿದಂತಾಗಲ್ಲವೇ’ ಎಂದು ಕೇಳಿದರು.

‘ಪ್ರಧಾನಿ ಮೋದಿ ಬಳಿ ದೂರದೃಷ್ಟಿಯಿಲ್ಲ. ದೂರದೃಷ್ಟಿವುಳ್ಳವರು ದೇಶಕ್ಕಾಗಿ ಏನು ಮಾಡಬೇಕು ಎಂಬುದನ್ನು ಯೋಚಿಸಿ ಮಾಡುತ್ತಾರೆ. ಈ ಭಾಗದ ಜನರು ಹನಿರಕ್ತ ಸುರಿಸದೇ, ಕೇಂದ್ರ ಸರ್ಕಾರಕ್ಕೆ ಒತ್ತಾಯವನ್ನೂ ಮಾಡದಂಥ ಸಂದರ್ಭದಲ್ಲಿ ನಾವು ದೂರದೃಷ್ಟಿಯಿಂದ ಕಲ್ಯಾಣ ಕರ್ನಾಟಕಕ್ಕೆ 371(ಜೆ) ಕಲಂ ಜಾರಿಗೊಳಿಸಿದೆವು. ನಾವು ಇರಬಹುದು, ಹೋಗಬಹುದು. ಆದರೆ, ಮುಂದಿನ ಪೀಳಿಗೆಗೆ ಸಹಾಯವಾಗಲಿ ಬಹುಮತ ಇಲ್ಲದಿದ್ದರೂ ಸರ್ವಾನುಮತದಿಂದ ಈ ಕಾಯ್ದೆ ಜಾರಿಗೆ ಶ್ರಮಿಸಿದ್ದೆ’ ಎಂದರು.

‘ನಮಗೆ ದೇಶ ಮುಖ್ಯವಾಗಬೇಕೇ ಹೊರತು, ಪಕ್ಷ, ವ್ಯಕ್ತಿ ಮುಖ್ಯವಾಗಬಾರದು. ಆದರೆ, ಬಿಜೆಪಿಯವರು ಮೋದಿ ಇರುವ ತನಕ ಅದು ಮಾಡುತ್ತೇವೆ, ಇದು ಮಾಡುತ್ತೇವೆ ಎಂದೆಲ್ಲ ಮಾತನಾಡುತ್ತಾರೆ. 1952ರಿಂದಲೂ ಈತನಕದ ಯಾವುದೇ ಪ್ರಧಾನಿ ಇಂಥ ಮಾತನಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ತಮ್ಮ ಅಹಂ ಬಿಡಬೇಕು. ಎಲ್ಲರನ್ನೂ ತೆಗೆದುಕೊಂಡು ದೇಶದ ಅಭಿವೃದ್ಧಿಗೆ ದುಡಿಯಬೇಕು’ ಎಂದು ಆಗ್ರಹಿಸಿದರು.

ಮತಪತ್ರ ಬಳಕೆ ನಿರ್ಧಾರ ಸ್ವಾಗತಾರ್ಹ

‘15–16 ವರ್ಷಗಳಿಂದ ಈಚೆಗೆ ಬಳಸುತ್ತಿರುವ ಇವಿಎಂಗಳನ್ನೇ ನೀವೆಲ್ಲ ನಂಬುವುದಾದರೆ, 50 ವರ್ಷಗಳ ಕಾಲ ಬಳಸಿದ್ದ ಮತಪತ್ರಗಳನ್ನು ಯಾಕೆ ನಂಬಬಾರದು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

‘ಇವಿಎಂಗಳ ಬಗೆಗೆ ನಂಬಿಕೆ ಇಲ್ಲವೇ ಎಂದು ಬಿಜೆಪಿ ಪ್ರಶ್ನಿಸುತ್ತಿದೆ’ ಎಂಬ ಪ್ರಶ್ನೆಗೆ ಖರ್ಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.

‘ಯಾವುದೇ ವ್ಯವಸ್ಥೆಯ ಆಗು–ಹೋಗುಗಳನ್ನು ನೋಡಿಕೊಂಡು ಬದಲಾವಣೆ ತರಲಾಗುತ್ತದೆ. ಅಂಥ ಬದಲಾವಣೆ ಕರ್ನಾಟಕ ಸರ್ಕಾರ ತರಲು ನಿರ್ಧರಿಸಿದೆ. ಬ್ಯಾಲೆಟ್ ಮುಂಬರುವ ಚುನಾವಣೆಯಲ್ಲಿ ಮತ ಪತ್ರ ಬಳಕೆಗೆ ಕರ್ನಾಟಕ ಸರ್ಕಾರ ಮುಂದಾಗಿರುವ ಒಳ್ಳೆಯ ಕೆಲಸ’ ಎಂದರು.

‘ನೀವು ಇವಿಎಂ ಬದಲಾಯಿಸುತ್ತೀರಿ, ಮತಗಳನ್ನೂ ಕಳ್ಳತನ ಮಾಡುತ್ತೀರಿ. ಇದು ಕಲಬುರಗಿ, ಕರ್ನಾಟಕ ಹಾಗೂ ಬಿಹಾರದಲ್ಲೂ ಇದನ್ನು ನೋಡಿದ್ದೇವೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಲೋಕಸಭಾ ಮತಕ್ಷೇತ್ರದ ಐದಾರು ಕಡೆ 20 ಸಾವಿರದಷ್ಟು ಮತಗಳ ಅಂತರ ಹೇಗೆ ಬರಲು ಸಾಧ್ಯವಾಯಿತು? ಹೀಗಾದರೆ ಇವಿಎಂ ಮೇಲೆ ನಂಬಿಕೆ ಹೇಗೆ ಬರಬೇಕು?’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.