ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬಾಗಿಲಿಗೆ ಪೊಲೀಸ್ ಕಾರ್ಯಕ್ರಮ

Last Updated 9 ಏಪ್ರಿಲ್ 2022, 4:29 IST
ಅಕ್ಷರ ಗಾತ್ರ

ವಾಡಿ: ‘ಗ್ರಾಮಗಳಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು. ಸಮಾಜವಿರೋಧಿ ಕೃತ್ಯಗಳ ತಡೆಗೆ ನಾವು ಕಂಕಣ ಬದ್ದರಾಗಿದ್ದೇವೆ’ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಹೇಳಿದರು.

ಸಮೀಪದ ಲಾಡ್ಲಾಪುರ ಗ್ರಾಮ ಪಂಚಾಯತಿ ಕಚೇರಿ ಆವರಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಜರುಗಿದ 'ಮನೆ ಬಾಗಿಲಿಗೆ ಪೊಲೀಸರು' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಮಾಜಿಕ ಶಾಂತಿ ಕದಡುವವರ ವಿರುದ್ದ ಪೊಲೀಸ್ ಇಲಾಖೆ ದಿಟ್ಟ ಕೈಗೊಳ್ಳುತ್ತಲಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿದೆ ಎಂದರು.

ಗ್ರಾ.ಪಂ ಅಧ್ಯಕ್ಷೆ ಸೋನಿಬಾಯಿ ರಾಠೋಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಪ್ರಕಾಶ ಯಾತನೂರು, ಪಿಎಸ್ಐ ಮಹಾಂತೇಶ ಪಾಟೀಲ ಇದ್ದರು.

ಬಸವರಾಜಗೌಡ ಮಾಲಿಪಾಟೀಲ, ನಾಗೇಂದ್ರಪ್ಪ ಮುಕ್ತೇದಾರ, ವೀರೇಶ ಕೊಂಚುರು, ಗೋವಿಂದಪ್ಪ, ಮುಖಂಡರಾದ ವಿಶ್ವನಾಥ ಗಂಧಿ, ಶ್ಯಾಮಸುಂದರ ರೆಡಸನ್ , ಗುಂಡುಗೌಡ ಇಂಗಳಗಿ, ಈರಣ್ಣ ಮಲಕಂಡಿ, ದೊಡ್ಡಪ್ಪಗೌಡ ಪೊಲೀಸ್ ಪಾಟೀಲ, ಸಾಬಣ್ಣ ಆನೇಮಿ, ಸಾಬಣ್ಣ ಗೊಡಗ, ನಾಗಣ್ಣ ಹೂಗಾರ, ಚಂದಪ್ಪ ಲಕಬಾ, ತುಳಜರಾಮ ರಾಠೋಡ, ಸುಬ್ಬಣ್ಣ ವಡ್ಡರ, ಶಾಂತಕುಮಾರ ಎಣ್ಣಿ, ಪಿಡಿಓ ಕಲ್ಯಾಣಿ ಕೊಳ್ಳದ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT