ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಕುಂಚಾವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ.

ಬೀದರ್ ಮೂಲದ ಅವಿನಾಶ ಸಿದ್ರಾಮ (24), ಅಭಿಷೇಕ ವಿಠಲರಾವ್ (26) ಮತ್ತು ಸಂಜು ಪುಂಡಲಿಕ (40) ಮೃತರು. ಗಾಯಗೊಂಡ ವಿನೋದ ಪುಂಡಲಿಕ, ನವಿನ್ ರಾಮ್ಲು ಹಾಗೂ ಅರುಣ ಭೋಜಪ್ಪ ಅವರನ್ನು ಬೀದರ್ನ ಬ್ರಿಮ್ಸ್ಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶಹಾಪುರ–ಶಿವರಾಪುರ ರಾಜ್ಯ ಹೆದ್ದಾರಿ 149ರಲ್ಲಿ ಮಧ್ಯಾಹ್ನ 1ರ ಸುಮಾರಿಗೆ ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ತೆಲಂಗಾಣದ ತೋರಮಾಮಿಡಿ ಗ್ರಾಮದ ಕಡೆಯಿಂದ ತಾಂಡೂರಿನತ್ತ ಹೊರಟಿದ್ದ ಕಾರಿಗೆ ಮೊಗದಂಪುರ ಕಡೆಯಿಂದ ಶಿವರಾಂಪುರದತ್ತ ಹೊರಟಿದ್ದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮವಾಗಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ ಎಂದು ಹೇಳಿದರು.

ಸ್ಥಳಕ್ಕೆ ಕುಂಚಾವರಂ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.