ಬುಧವಾರ, ಡಿಸೆಂಬರ್ 7, 2022
21 °C
ಗ್ರಾ.ಪಂ. ನೌಕರರ ಸಂಘದಿಂದ ಎಸಿಎಸ್ ಎಲ್.ಕೆ. ಅತೀಕ್ ಅವರಿಗೆ ಮನವಿ

ಕಲಬುರಗಿ: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮಗಳ ತನಿಖೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಜಿಲ್ಲೆಯಲ್ಲಿ 15ನೇ ಹಣಕಾಸಿನಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಪದಾಧಿಕಾರಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಜಿಲ್ಲೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇಎಸ್‌ಎಂಎಫ್‍ನಲ್ಲಿ ನೊಂದಣಿಯಾದರೂ ವೇತನ ನಿಡದೇ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಅನುಕಂಪದ ನೇಮಕಾತಿ ಮಾಡಿಕೊಳ್ಳದೆ, ಬಾಕಿ ಇರುವ ಹಳೆಯ 10–18 ತಿಂಗಳ ವೇತನ ನೀಡಲು ತಮ್ಮ ಆದೇಶ ಇದ್ದರೂ 15ನೇ ಹಣಕಾಸಿನಲ್ಲಿ ಯೋಜನಾ ವರದಿ ತಯಾರು ಮಾಡುವಾಗ ಸಿಬ್ಬಂದಿ ವೇತನಕ್ಕೆ ಅನುದಾನ ಉಳಿಸದೇ ಸಂಪೂರ್ಣವಾಗಿ ಖರ್ಚು ಮಾಡುವ ಮೂಲಕ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

ಜಿಲ್ಲಾ ಪಂಚಾಯಿತಿಯಲ್ಲಿ ನೂರಾರು ನೌಕರರ ಸೇವಾ ಹಿರಿತನ ಅನುಮೋದನೆ ನೀಡದೆ ಹಣ ನೀಡಿದವರಿಗೆ ಮಾತ್ರ ಜಿಲ್ಲಾ ಪಂಚಾಯಿತಿಯಲ್ಲಿ ಅನುಮೋದನೆ ನೀಡಲಾಗುತ್ತಿದೆ. ಕಸಗುಡಿಸುವ, ನಳ ಬಿಡುವ ಪಂಚಾಯಿತಿ ನೌಕರರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸಿಬ್ಬಂದಿಯನ್ನು 2.0 ಪಂಚತಂತ್ರದಲ್ಲಿ ನೋಂದಾಯಿಸಲು ಸಹ ಅನವಶ್ಯಕವಾದ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಅಧಿಕಾರ ಇಲ್ಲದಿದ್ದರೂ ಸುಳ್ಳು ದಾಖಲೆಗಳು ಸೃಷ್ಟಿಸಿ ಅಕ್ರಮ ನೇಮಕಾತಿಗಳು ನಡೆಯುತ್ತಿವೆ ಎಂದಿದ್ದಾರೆ.

ಸಂಘದ ಕಮಲಾಪುರ ತಾಲ್ಲೂಕು ಗೌರವಾಧ್ಯಕ್ಷ ಸುನೀಲ ಮಾನಪಡೆ ಹಾಗೂ ಪದಾಧಿಕರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು