ಅಡುಗೆ ಸಹಾಯಕರು ಹಾಗೂ ಮುಖ್ಯ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡ ಪಾಲಕರು, ‘ಕೊಳೆತ ತರಕಾರಿ, ಅಶುದ್ಧ ನೀರಿನಿಂದ ಮಕ್ಕಳ ಆರೋಗ್ಯ ಹದಗೆಟ್ಟರೆ ಯಾರೂ ಜವಾಬ್ದಾರರು? ಸರ್ಕಾರದಿಂದ ಬಿಸಿಯೂಟ, ತರಕಾರಿ ಖರೀದಿಗೆ ಹಣ ಬರುವದಿಲ್ಲವಾ? ನಿತ್ಯ ತಾಜಾ ತರಕಾರಿಗಳು ಏಕೆ ಬಳಕೆ ಮಾಡುವದಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.