ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ಕಾರ್ಮಿಕರಿಗೆ ಸುರಕ್ಷಾ ಕಿಟ್‌

Last Updated 23 ಜೂನ್ 2021, 3:48 IST
ಅಕ್ಷರ ಗಾತ್ರ

ಕಲಬುರ್ಗಿ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡಲಾಗುವ ಸುರಕ್ಷಾ ಹಾಗೂ ನೈರ್ಮಲ್ಯೀಕರಣ ಕಿಟ್‌ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಅವರು ಕಾರ್ಮಿಕರಿಗೆ ವಿತರಿಸಿದರು.

ಜಿಲ್ಲೆಯ ಶಹಾಬಾದ್‌ ಇಎಸ್‌ಐಸಿ ಅಸ್ಪತ್ರೆಯ ನವೀಕರಣ ವೀಕ್ಷಣೆ ಮಾಡಿದ ಸಚಿವ, ಅಲ್ಲಿ ಕಾರ್ಯನಿರತ 150 ಮಹಿಳಾ ಮತ್ತು ಪುರುಷ ಕಟ್ಟಡ ಕಾರ್ಮಿಕರಿಗೆ ಕಿಟ್‌ಗಳನ್ನು ವಿತರಿಸಿದರು.

ಮಹಿಳಾ ಕಾರ್ಮಿಕರಿಗೆ ವಿತರಿಸಲಾದ ಗುಲಾಬಿ ಕಿಟ್‌ನಲ್ಲಿ ಹ್ಯಾಂಡ್‌ವಾಶ್ ಸ್ಯಾನಿಟೈಸರ್, ಸೋಪ್, ಬಟ್ಟೆ ಸೋಪ್, ಮಾಸ್ಕ್ ಹಾಗೂ ಸ್ಯಾನಿಟರಿ ಪ್ಯಾಡ್‌ಗಳಿವೆ. ಪುರುಷ ಕಾರ್ಮಿಕರಿಗೆ ವಿತರಿಸಲಾದ ಕಪ್ಪು ಬಣ್ಣದ ಕಿಟ್‌ನಲ್ಲಿ ಸ್ಯಾನಿಟೈಸರ್ ಹ್ಯಾಂಡ್ ವಾಶ್, ಸೋಪ್, ಬಟ್ಟೆ ಸೋಪ್ ಮತ್ತು ಮಾಸ್ಕ್ ಒಳಗೊಂಡಿದೆ.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ, ಶಾಸಕರಾದ ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಸಹಾಯಕ ಆಯುಕ್ತ ರಮೇಶ ಕೋಲಾರ, ಪ್ರಾದೇಶಿಕ ವಿಭಾಗದ ಉಪ ಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ಪ್ರೊಬೇಷನರಿ ಕಾರ್ಮಿಕ ಅಧಿಕಾರಿ ಡಾ.ದತ್ತಾತ್ರೇಯ ಗಾದಾ, ಹಿರಿಯ ಕಾರ್ಮಿಕ ನಿರೀಕ್ಷಕ ರವೀಂದ್ರಕುಮಾರ, ಎನ್.ಸಿ.ಎಲ್.ಪಿ. ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ, ಶಹಾಬಾದ್‌ ತಹಶೀಲ್ದಾರ್‌ ಸುರೇಶ ವರ್ಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT